HEALTH TIPS

ಕೊಡಗಿನ ಬುಡಕಟ್ಟು ಜನಾಂಗದ ಕುಂಡೆ ಹಬ್ಬ: ಅಶ್ಲೀಲ ಪದಗಳ ಸುರಿಮಳೆಯೇ ಹಬ್ಬದ ಈ ವಿಶೇಷತೆ

 ಕುಂಡೇ... ಕುಂಡೇ... ಕುಂಡೇ ನೋಡ.. ಅವಳ ಅಂದ ನೋಡ... ಲಕ್ಸ್‌ ಸೋಪು ನೋಡ, ಬಿಳಿ ಕುಂಡೆ.... ಹೀಗೆ ಬಾಯಿಗೆ ಬರುವ ಅಷ್ಟೂ ಅಶ್ಲೀಲ ಶಬ್ದಗಳನ್ನು ಖುಷಿ-ಖುಷಿಯಾಗಿ ಆನಂದಿಸುವುದೇ ಕುಂಡೆ ಹಬ್ಬ. ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ರದ್ದಾಗಿದ್ದ ಕುಂಡೆ ಹಬ್ಬವನ್ನು ಕಣ್ತುಂಬಿ , ಅಶ್ಲೀಲ ಬೈಗುಳವನ್ನು ಕಿವಿ ತುಂಬಿಕೊಳ್ಳುವ ಸೌಭಾಗ್ಯ ಕೊಡಗಿನ ಜನತೆಗೆ. ಈ ವರ್ಷ ಮೇ 25, 26ರಂದು ಕುಂಡೆ ಹಬ್ಬವನ್ನು ಆಚರಿಸುತ್ತಾರೆ.

ಕುಂಡೆ ಹಬ್ಬ ಕೊಡಗಿನ ಬುಡಕಟ್ಟು ಜನಾಂಗದವರ ಹಬ್ಬ. ಈ ದಿನ ಕಂಠಮಟ್ಟ ಕುಡಿದು ಚಿತ್ರ-ವಿಚಿತ್ರ ವೇಷಗಳನ್ನು ತೊಟ್ಟು ದಾರಿಯಲ್ಲಿ ಕಂಡವರೆನ್ನೆಲ್ಲಾ ಆ ವ್ಯಕ್ತಿ ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ ಅಥವಾ ತನಗೆ ಕೆಲಸ ಕೊಡುತ್ತಿರುವ ತೋಟದ ಮಾಲೀಕನೇ ಆಗಿರಲಿ ಯಾರೇ ಆಗಿರಲಿ ಮುಲಾಜಿಯಿಲ್ಲದೆ ಅಶ್ಲೀಲ ಪದಗಳಿಂದ ಬೈಯ್ಯುತ್ತಾರೆ, ಅಂಥ ಕೆಟ್ಟ ಪದಗಳಿಂದ ಬೈಯ್ಯುತ್ತಿದ್ದರೂ ಯಾರು ಏನೂ ಹೇಳುವುದಿಲ್ಲ, ಅವರಿಗೆ ಸ್ವಲ್ಪ ಹಣ ನೀಡಿ ಆ ಬೈಗುಳವನ್ನು ಕೇಳಿ ಖುಷಿ ಪಡುತ್ತಾರೆ, ಅದುವೇ ವಿಶೇಷ. ಅಶ್ಲೀಲವಾಗಿ ಬೈಯ್ಯುವುದಕ್ಕೂ ಒಂದು ಹಬ್ಬವಿದೆಯೇ ಎಂದರೆ ಹೊರಗಿನವರಿಗೆ ಆಶ್ಚರ್ಯವಾಗಬಹುದು.

ಆದರೆ ಕೊಡಗಿನವರು ಈ ಹಬ್ಬವನ್ನು ತುಂಬಾನೇ ಆನಂದಿಸುತ್ತಾರೆ, ಈ ಹಬ್ಬದ ಸಮಯದಲ್ಲಿ ಕೊಡಗಿಗೆ ಬರುವ ಪ್ರವಾಸಿಗರಿಗೂ ಭರ್ಜರಿ ಬೈಗುಳ ತಿನ್ನುವ ಸೌಭಾಗ್ಯ.

ಕೆಟ್ಟದಾಗಿ ಬೈಯ್ದು ನಂತರ ತಪ್ಪಾಯ್ತು ಕ್ಷಮಿಸಿ ಬಿಡಪ್ಪಾ ಎಂದು ಕೇಳುವ ಆಚರಣೆ:

ಕೊಡಗಿನ ಬುಡಕಟ್ಟು ಜನಾಂಗದವರು ಚಿತ್ರ-ವಿಚಿತ್ರ ವೇಷ ಹಾಕುತ್ತಾ ಎರಡು ದಿನ ಬಾಯಿಗೆ ಬಂದಂತೆ ಬೈಯ್ಯುತ್ತಾ ರಸ್ತೆಗಳಲ್ಲಿ ಕುಣಿಯುತ್ತಾ ಈ ವಿಶಿಷ್ಟ ಹಬ್ಬ ಆಚರಿಸುತ್ತಾರೆ, ನಂತರ ಗೋಣಿಕೊಪ್ಪದ ದೇವರಪುರದ ಅಯ್ಯಪ್ಪ ದೇವಾಲಯದ ಮೈದಾನದಲ್ಲಿ ಸೇರಿ ಬೈಯ್ದಿದ್ದಕ್ಕೆ ದೇವರಲ್ಲಿ ಕ್ಷಮೆ ಕೇಳಿ ಹಬ್ಬವನ್ನು ಆಚರಿಸುತ್ತಾರೆ.

ಮಹಿಳೆಯರ ಒಳ ಉಡುಪುಗಳು, ಒಣ ಸೋರೆಕಾಯಿ, ದೊಣ್ಣೆಗಳು ಇವೆಲ್ಲಾ ಈ ಹಬ್ಬದ ಹೈಲೈಟ್‌ ಈ ಹಬ್ಬದಲ್ಲಿ ಪುರುಷರು ಮಹಿಳೆಯರ ಒಳ ಉಡುಪು ಧರಿಸಿ ಅಥವಾ ಸ್ತ್ರೀಯಂತೆ ಕಾಣುವಂತೆ ವಿಚಿತ್ರದಲ್ಲಿ ವಿಚಿತ್ರ ವೇಷಗಳನ್ನು ತೊಟ್ಟು ಮೈಗೆಲ್ಲಾ ಬಣ್ಣ ಬಳಿದು , ಕೂಗಳಲ್ಲಿ ಕೋಲು, ಹಳೆಯ ಡ್ರಮ್‌ ಅಥವಾ ಟಿನ್ ಬಡೆದು ಭಿಕ್ಷೆ ಬೇಡುತ್ತಾರೆ. ದಾರಿಯಲ್ಲಿ ಕಂಡ ಎಲ್ಲರನ್ನೂ ಅಡ್ಡ ಹಾಕಿ ಬೈಯ್ದು ಹಣ ಕೇಳುತ್ತಾರೆ. ಹಣ ಕೊಟ್ಟಾಗ ಒಳ್ಳೆ ಕುಂಡೇ ಎಂದು ಹಾಡುತ್ತಾ ಮುಂದೆ ಸಾಗುತ್ತಾರೆ.

ಕುಂಡೆ ಹಬ್ಬದ ಆಚರಣೆ ವಿಧಾನ: ದೇವರಪುರ ಹೆಬ್ಬಾಲೆಯ ಸಣ್ಣುವಂಡ ಕುಟುಂಬದ ಮುಖ್ಯಸ್ಥರ ಮುಂದಾಳತ್ವದಲ್ಲಿ ಈ ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬದಲ್ಲಿ ಭದ್ರಕಾಳಿಯನ್ನು ಪೂಜಿಸಲಾಗುವುದು. ದೇವಾಲಯದ ಭದ್ರಕಾಳಿ ಉತ್ಸವ ಮೂರ್ತಿಯನ್ನು ಮರದ ಕುದುರೆಯ ಮೂಲಕ ಅಯ್ಯಪ್ಪ ದೇವಾಲಯಕ್ಕೆ ಕರೆತಂದು ಪೂಜಾ ಕೈಂಕರ್ಯವನ್ನು ನೆರವೇರಿಸಲಾಗುವುದು. ಹರಕೆಹೊತ್ತು ಬಂದಿರುವ ಜನರು ಕೀಲು ಕುದುರೆಯ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ.

ಬುಡಕಟ್ಟು ಜನಾಂಗದವರೇ ಹೆಚ್ಚಾಗಿ ಸೇರಿ ಆಚರಿಸುವ ಹಬ್ಬ ಕುಂಡೆ ಹಬ್ಬದಲ್ಲಿ ಇತರರು ಭಾಗಿಯಾಗುವುದಾದರೂ ಬುಡಕಟ್ಟು ಜನಾಂಗದವರೇ ಹೆಚ್ಚಾಗಿ ನೆರೆದಿರುತ್ತಾರೆ. ಈ ಹಬ್ಬದಲ್ಲಿ ಅಯ್ಯಪ್ಪ ದೇಗುಲದಲ್ಲಿ ಪಟ್ಟಣಿ, ಭಂಡಾರ ಹಾಕುವುದು, ಕಳಿಕಟ್ಟು ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯುತ್ತದೆ.

ಎಷ್ಟೋ ವೇಷಧಾರಿಗಳು ದೇವಾಲಯ ತಲುಪುವ ಮುನ್ನ ಚರಂಡಿಯಲ್ಲಿ ಬಿದ್ದಿರುತ್ತಾರೆ:

 ಈ ಹಬ್ಬದ ಪ್ರಕಾರ ವೇಷ ಹಾಕಿ ಭಿಕ್ಷೆ ಬೇಡಿದ ಬಳಿಕ ಭದ್ರಕಾಳಿಯ ದೇಗುಲಕ್ಕೆ ಹೋಗಬೇಕು, ಆದರೆ ಕಂಠಮಟ್ಟ ಕುಡಿದು ತೂರಾಡುವವ ಎಷ್ಟೋ ಜನರು ದೇವಾಲಯಕ್ಕೆ ಹೋಗುವುದೇ ಇಲ್ಲ ರಸ್ತೆ ಬದಿಯಲ್ಲಿ ಅಥವಾ ಚರಂಡಿ ಬದಿಯಲ್ಲಿ ಬಿದ್ದಿರುತ್ತಾರೆ, ನಶೆಯೆಲ್ಲಾ ಇಳಿದ ಮೇಲೆ ದೇಗುಲಕ್ಕೆ ಹೋಗುತ್ತಾರೆ. 

ಭದ್ರಕಾಳಿ ಬಳಿ ಕ್ಷಮೆ ಕೇಳಿದಾಗ ಹಬ್ಬವು ಮುಕ್ತಾಯವಾಗುವುದು:

   ಈ ಹಬ್ಬದಲ್ಲಿ ಪುರುಷರೇ ಹೆಚ್ಚಾಗಿ ಭಾಗವಹಿಸುತ್ತಾರೆ, ವಿಚಿತ್ರ ವೇಷ ತೊಟ್ಟು ಕುಣಿಯುವವರು ಪುರುಷರೇ ಆಗಿರುತ್ತಾರೆ. ಎರಡು ದಿನ ಬಾಯಿಗೆ ಬಂದಂತೆ ಬೈಯ್ದು ನಂತರ ಭದ್ರಕಾಳಿ ದೇವಾಲಯಕ್ಕೆ ಬಂದು ದೇವಿ ಬಳಿ ಬೈಯ್ದಿದ್ದಕ್ಕೆ ತಪ್ಪಾಯ್ತು ಎಂದು ಕೇಳಿಕೊಳ್ಳುವುದರೊಂದಿಗೆ ಹಬ್ಬವು ಮುಕ್ತಾಯವಾಗುತ್ತದೆ.





Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries