ನವದೆಹಲಿ :ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಗುರುವಾರ ಭಾರತದ 2022ರ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಹಿಂದಿನ 9.1%ದಿಂದ 8.8%ಕ್ಕೆ ತಗ್ಗಿಸಿದೆ. ಇದಕ್ಕೆ ಹಣದುಬ್ಬರ ಕಾರಣವೆಂದು ಅದು ಹೇಳಿದೆ.
0
samarasasudhi
ಮೇ 26, 2022
ನವದೆಹಲಿ :ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಗುರುವಾರ ಭಾರತದ 2022ರ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಹಿಂದಿನ 9.1%ದಿಂದ 8.8%ಕ್ಕೆ ತಗ್ಗಿಸಿದೆ. ಇದಕ್ಕೆ ಹಣದುಬ್ಬರ ಕಾರಣವೆಂದು ಅದು ಹೇಳಿದೆ.
2021ರ ಡಿಸೆಂಬರ್ ತ್ರೈಮಾಸಿಕದಿಂದ ಆರಂಭಗೊಂಡ ಬೆಳವಣಿಗೆ ವೇಗೋತ್ಕರ್ಷವು ಈ ವರ್ಷದ ಮೊದಲ ನಾಲ್ಕು ತಿಂಗಳವರೆಗೂ ಮುಂದುವರಿಯಿತು ಎನ್ನುವುದನ್ನು ಅಂಕಿಅಂಶಗಳು ತಿಳಿಸಿವೆ ಎಂದು ಅದು ತನ್ನ ಗ್ಲೋಬಲ್ ಮ್ಯಾಕ್ರೋ ಔಟ್‌ಲುಕ್ 2022-23ರಲ್ಲಿ ಸೇರಿಸಲಾದ ಹೊಸ ಟಿಪ್ಟಣಿುಯಲ್ಲಿ ತಿಳಿಸಿದೆ.
ಆದರೆ, ಕಚ್ಚಾತೈಲ, ಆಹಾರ ಮತ್ತು ರಸಗೊಬ್ಬರಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವು ಮುಂದಿನ ತಿಂಗಳುಗಳಲ್ಲಿ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಮತ್ತು ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಇಂಧನ ಮತ್ತು ಆಹಾರ ಹಣದುಬ್ಬರವನ್ನು ತಡೆಯಲು ಬಡ್ಡಿದರ ಏರಿಕೆ ಮಾಡಲಾಗಿರುವುದರಿಂದ, ಜನರ ಬೇಡಿಕೆ ಚೇತರಿಕೆಯ ಗತಿಯು ಕುಂಠಿತಗೊಳ್ಳಲಿದೆ ಎಂದಿದೆ.
''ಭಾರತದ ಕ್ಯಾಲೆಂಡರ್ ವರ್ಷ 2022ರ ಬೆಳವಣಿಗೆ ಮುನ್ನೋಟವನ್ನು ನಾವು ಮಾರ್ಚ್‌ನಲ್ಲಿ ಮಾಡಲಾಗಿರುವ ಮುನ್ನೋಟ 9.1%ದಿಂದ 8.8%ಕ್ಕೆ ತಗ್ಗಿಸಿದ್ದೇವೆ. ಅದೇ ವೇಳೆ, 2023ರ ಬೆಳವಣಿಗೆ ಮುನ್ನೋಟವನ್ನು 5.4%ದಲ್ಲೇ ಇರಿಸಿದ್ದೇವೆ'' ಎಂದು ಮೂಡೀಸ್ ಹೇಳಿದೆ.