ಭೋಪಾಲ್: ಮಧ್ಯಪ್ರದೇಶದ ರತ್ಲಾಮ್ನಲ್ಲಿರುವ ರೈಲು ನಿಲ್ದಾಣದಲ್ಲಿ ಬುಧವಾರ ಸಂಜೆ, ವಿಶೇಷ ಪ್ರಸಂಗವೊಂದು ನಡೆದಿದೆ. ಹಲವಾರು ಪ್ರಯಾಣಿಕರು ರೈಲ್ವೇ ನಿಲ್ದಾಣದಲ್ಲಿ 'ಗಾರ್ಬಾ ನೃತ್ಯ' ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಬಾಂದ್ರಾ-ಹರಿದ್ವಾರ ರೈಲು ಬುಧವಾರ ರಾತ್ರಿ 10.15 ಕ್ಕೆ ರತ್ಲಾಮ್ ನಿಲ್ದಾಣಕ್ಕೆ ತಲುಪಿದ್ದು, ಇದು ವೇಳಾಪಟ್ಟಿಗಿಂತಲೂ 20 ನಿಮಿಷಗಳ ಮುಂಚಿತವಾಗಿ ತಲುಪಿದೆ. ರತ್ಲಾಮ್ ನಿಲ್ದಾಣದಲ್ಲಿ ರೈಲು 10 ನಿಮಿಷಗಳ ನಿಲುಗಡೆ ಸಮಯವನ್ನು ಹೊಂದಿತ್ತು, ಆದರೆ, 20 ನಿಮಿಷ ಶೀಘ್ರವೇ ರೈಲು ಬಂದಿರುವುದರಿಂದ ಪ್ರಯಾಣಿಕರಿಗೆ 30 ನಿಮಿಷಗಳು ಸಿಕ್ಕಿದೆ ಎಂದು ndtv ವರದಿ ಮಾಡಿದೆ.