ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಸ್ಥಳೀಯ ಕಲ್ಲಡ್ಕ ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿ ಸುಶೀಲ ಕುಞ್ಞಣ್ಣ ಗೌಡ ಅವರ ವಿದಾಯ ಕೂಟ, ಸನ್ಮಾನ ಸಮಾರಂಭ ಸಭೆ ಭಾನುವಾರ ನೆರವೇರಿತು. ಅಂಗನವಾಡಿಯ ಹಳೆವಿದ್ಯಾರ್ಥಿಗಳಿಂದ ಸಂಯೋಜಿಸಲ್ಪಟ್ಟ ಈ ಮನೋಜ್ಞ ಕಾರ್ಯಕ್ರಮದ ಆರಂಭದಲ್ಲಿ ಸ್ಥಳಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಲಾಸಂಘದ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಅವರ ಅಧ್ಯಕ್ಷತೆಯಲ್ಲಿ ಗಣ್ಯರ ಉಪಸ್ಥಿತಿಯೊಂದಿಗೆ ಈ ಸಭಾ ಸಮಾರಂಭವು ಆರಂಭಗೊಂಡಿತು. ಕು. ಶ್ವೇತಾ ಗುಂಡ್ಯಡ್ಕ ಅವರು ಪ್ರಾರ್ಥನಾಗೀತೆ ಹಾಡಿದರು. ಕು. ಲತಾ ಆಚಾರ್ಯ ಬನಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಬಾಲಕೃಷ್ಣ ಗೌಡ ಬೆಳ್ಳಿಪ್ಪಾಡಿ, ಗುತ್ತು ಸೀತಾರಾಮ ರೈ, ಪಂಚಾಯತ್ ಸದಸ್ಯೆ ನಳಿನಾಕ್ಷಿ, ರಾಮಯ್ಯ ರೈ ಕಲ್ಲಡ್ಕ ಗುತ್ತು, ಗೋಪಾಲಯ್ಯ ಕೋಟಿಗದ್ದೆ, ಬಿ.ಹೆಚ್. ಕುಶಾಲಪ್ಪ ಗೌಡ, ಆಶಾಕಾರ್ಯಕರ್ತೆ ಶಾಂತಾಕುಮಾರಿ, ಬಿ.ಹೆಚ್.ವೆಂಕಪ್ಪ ಗೌಡ, ಮಜೀದ್ ದೇಲಂಪಾಡಿ, ಐತ್ತಪ್ಪ ಗೌಡ ಮುದಿಯಾರು, ಕವಿತಾ ಕೊಳಂಬೆ, ಜಯಂತಿ ಗುಂಡ್ಯಡ್ಕ, ಆಶಾ ಬೆಳ್ಳಿಪ್ಪಾಡಿ ಅವರು ಶುಭಾಸಂಶನೆ ಗೈದರು. ಗಣ್ಯರ ಉಪಸ್ಥಿತಿಯಲ್ಲಿ ಸುಶೀಲ ಕುಞ್ಞಣ್ಣ ಗೌಡರಿಗೆ ಹೃದಯಸ್ಪರ್ಶಿ ಸನ್ಮಾನ ಗೌರವವನ್ನಿತ್ತು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನಿತರಿಗೆ ನೆನಪಿನ ಕಾಣಿಕೆಯಾಗಿ ಎಲ್.ಜಿ.ರೆಫ್ರಿಜರೇಟರನ್ನು ಸಭಾಸದರೆಲ್ಲರ ಸಮ್ಮುಖದಲ್ಲಿ ಸಮರ್ಪಿಸಲಾಯಿತು. ಕೊಳಂಬೆ ಕುಶಾಲಪ್ಪ ಗೌಡ, ಅಶೋಕ ಗೌಡ ಕೊಳಂಬೆ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ಮಿಥುನ್ ಪೆಂರ್ದಲಪದವು, ಮನೋಜ್ ಕೊಳಂಬೆ, ಧನಂಜಯ ಬೆಳ್ಳಿಪ್ಪಾಡಿ, ಹರೀಶ್ ಪೂಜಾರಿ ಮುಂತಾದ ಸ್ಥಳೀಯ ಹಳೆವಿದ್ಯಾರ್ಥಿ ಯುವಕರ ಮುಂದಾಳುತನದಲ್ಲಿ ಭೋಜನಕೂಟ, ಸಾಂಸ್ಕøತಿಕ ವೈವಿದ್ಯಗಳು ನಡೆಯಿತು. ಸುಶ್ಮಿತಾ ಮೋಹನ ಗೌಡ ನಿರೂಪಿಸಿದರು. ಅಂಗನವಾಡಿ ಶಿಕ್ಷಕಿ ದೇವಕಿ ಎನ್ ಅವರು ವಂದಿಸಿದರು.




.jpg)
