ಕಾಸರಗೋಡು: ರಾಜ್ಯ ಸಾಕ್ಷರತಾ ಮಿಷನ್ ಜಿಲ್ಲೆಯಲ್ಲಿ ಓದು ಅರ್ಧಕ್ಕೆ ನಿಲ್ಲಸಿದವರಿಗಾಗಿ ಆಯೋಜಿಸುತ್ತಿರುವ ಏಳನೇ ತುಲ್ಯತಾ ತರಗತಿ ಪರೀಕ್ಷೆ ಆರಂಭಗೊಂಡಿತು. ಹೊಸದುರ್ಗ ಸರ್ಕಾರಿ ಹೈಯರ್ ಸಎಕೆಂಡರಿ ಶಾಲೆಯಲ್ಲಿ ಮೋನಾಚ ಮೂಲದ ರಾಮಕೃಷ್ಣ ಎಂಬವರಿಗೆ ಪ್ರಶ್ನೆಪತ್ರಿಕೆ ನೀಡುವ ಮೂಲಕ ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು.
ಕಾಞಂಗಾಡು ನಗರಸಭಾ ಸದಸ್ಯೆ ನಂದನ ಬಾಲರಾಜ್ ಅಧ್ಯಕ್ಷತೆ ವಹಿಸಿದ್ದರು. ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ಶಾಲಾ ಮುಖ್ಯೋಪಾಧ್ಯಾಯ ಕೆ.ವಿ.ಸುರೇಶ್ ಕುಮಾರ್, ಪಿಟಿಎ ಅಧ್ಯಕ್ಷ ಸಂತೋಷ ಕುಶಾಲನಗರ, ಶಿಕ್ಷಕರಾದ ಎಂ.ಕೆ.ಸುಮೇಶ್, ಕೆ.ಪದ್ಮಾವತಿ, ನೋಡಲ್ ಪ್ರೇರಕಾಯಿಶ ಮಹಮ್ಮದ್ ಉಪಸ್ಥಿತರಿದ್ದರು. ಸಾಕ್ಷರತಾ ಪ್ರೇರಕರಾದ ಎಂ ಶಾಲಿನಿ, ವಿ ರಜನಿ, ಎಂ ನಾರಾಯಣಿ, ಎಂ.ಬಿಲಮಾಣಿ ಪರೀಕ್ಷೆ ನೇತೃತ್ವ ವಹಿಸಿದ್ದರು. ಕುಟ್ಟಿಕೋಲ್ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಮುರಳಿ, ಮುಳ್ಳೇರಿಯ ಹೈಯರ್ ಸೆಕೆಂಡರಿ ಶಾಲೆಯ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ರತ್ನಾಕರ, ರಾಜಪುರಂ ಹೋಲಿ ಫ್ಯಾಮಿಲಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಅಬ್ರಹಾಂ ಮಾಸ್ತರ್, ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಮಾಧವನ್ ಮಣಿಯಾರ, ಲ್ಯಾಮ್ ಎಲ್ ಪಿ ಸ್ಕೂಲ್ ಮತ್ತು ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸಾಕ್ಷರತಾ ಮಿಷನ್ ಜಿಲ್ಲಾ ಕೋ-ಆರ್ಡಿನೇಟರ್ ಪಿ ಎನ್ ಬಾಬು ಅವರು ಪ್ರಶ್ನೆ ಪತ್ರಿಕೆಗಳನ್ನು ಹಸ್ತಾಂತರಿಸುವ ಮೂಲಕ ಪರೀಕ್ಷೆಯನ್ನು ಉದ್ಘಾಟಿಸಿದರು.
ಬೋವಿಕಾನದ ಮಣಿಯಂಗೋಡು ಮೂಲದ ಹದಿನೆಂಟು ವರ್ಷದ ಬಿ.ಎಂ.ಅಬ್ದುಲ್ಲಾ 7ನೇ ತರಗತಿ ಸಮಾನತೆಯಲ್ಲಿ ಜಿಲ್ಲೆಯ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.





