ಕಾಸರಗೋಡು: ಪನತ್ತಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಂತೋಡು, ಮಾವುಂಗಲ್ ಸೇರಿದಂತೆ ವಿವಿಧೆಡೆ ಡೆಂಘೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕಾಸರಗೋಡು ಜಿಲ್ಲಾ ವೆಕ್ಟರ್ ನಿಯಂತ್ರಣ ಘಟಕದ ನೇತೃತ್ವದ ತಜ್ಞರ ತಂಡ ಪಾಣತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸಹಯೋಗದಲ್ಲಿ ಡೆಂಘೆ ಪೀಡಿತ ಪ್ರದೇಶಗಳಲ್ಲಿ ರೋಗ ಹರಡಲು ಕಾರಣವಾಗುವ ಮೂಲ ನಿರ್ಮೂಲನೆ ಚಟುವಟಿಕೆಗಳು ಮತ್ತು ಜಾಗೃತಿ ಅಭಿಯಾನ ನಡೆಸಲಾಯಿತು.
ವಾರ್ಡ್ ಸದಸ್ಯ ಜೇಮ್ಸ್ ಹಾಗೂ ಡಿವಿಸಿ ಘಟಕದ ಆರೋಗ್ಯ ಮೇಲ್ವಿಚಾರಕ ವೇಣುಗೋಪಾಲ್ ನೇತೃತ್ವದಲ್ಲಿ ಡಿವಿಸಿ ಘಟಕದ ಸಿಬ್ಬಂದಿ, ಪಾಣತ್ತೂರು ಪಿಎಚ್‍ಸಿ ಸಿಬ್ಬಂದಿ, ಆಶಾ, ಕುಟುಂಬಶ್ರೀ ಕಾರ್ಯಕರ್ತೆಯರು 8 ತಂಡಗಳಾಗಿ ಡೆಂಘೆ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಕೆಲಸ ನಡೆಸಿದರು. ಮನೆ, ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಸೊಳ್ಳೆ ಉತ್ಪತ್ತಿ ತಾಣ ಹಾಗೂ ರಬ್ಬರ್ ತೋಟಗಳಲ್ಲಿ ಮರಗಳಿಗೆ ಅಳವಡಿಸಿರುವ ಗೆರಟೆಗಳನ್ನು ತಕ್ಷಣ ತೆರವುಗೊಳಿಸವಂತೆ ಸೂಚಿಸಲಾಗಿದೆ. ನೌಕರರಾದ ಎಂ.ಸುನೀಲ್ ಕುಮಾರ್, ಪಿ.ತಂಕಮಣಿ, ಎಚ್.ಲತಾ, ಸ್ನೇಹಾ ುಪಸ್ಥಿತರಿದ್ದರು.





