ಕಾಸರಗೋಡು: ಮಳೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 24 ಗಂಟೆ ಕಾಲ ಚಟುವಟಿಕೆ ನಡೆಸಲಿರುವ ನಿಯಂತ್ರಣ ಕೊಠಡಿ ತೆರೆಯಲಾಗಿದೆಈ ಮಧ್ಯೆ ಮೇ 16ರಂದು ಕಾಸರಗೋಡು ಜಿಲ್ಲೆಯಲ್ಲಿ
ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದ್ದು, ಸಂಪರ್ಕಕ್ಕೆ ದೂರವಾಣಿ ಹಾಗೂ ಮೊಬೈಲ್ ನಂಬರ್ ನೀಡಲಾಗಿದೆ. (ದೂರವಾಣಿ: 04994-257700, ಮೊಬೈಲ್: 9446601700)
ಜಿಲ್ಲೆಯ ನಾಲ್ಕು ತಾಲೂಕು ಕೇಂದ್ರಗಳಲ್ಲೂ ನಿಯಂತ್ರಣ ಕೊಠಡಿ ಕಾರ್ಯಾಚರಿಸಲಿದೆ. ಕಾಸರಗೋಡು(04994-230021, 9447030021), ಮಂಜೇಶ್ವರಂ (04998-244044, 8547618464), ಹೊಸದುರ್ಗ(04672-204042, 9447494042), ವೆಳ್ಳರಿಕುಂಡು(04672-242320, 8547618470)




