ಉಪ್ಪಳ: ಐವತ್ತು ವರ್ಷಗಳ ಹಿಂದೆ ವೈದ್ಯಕೀಯ ಸೌಲಭ್ಯವಿಲ್ಲದೆ ತೀರಾ ಹಳ್ಳಿಗಾಡಾಗಿದ್ದ ಉಪ್ಪಳದಲ್ಲಿ ಆಸ್ಪತ್ರೆ ನಡೆಸುವ ಸಾಹಸ ತೋರಿದ ಉದಾರಿ , ಸಾಹಸಿ , ಸಮಾಜಮುಖಿ ಚಿಂತಕ , ಸದಾ ಕ್ರಿಯಾಶೀಲ ಡಾ. ಕೆ ಪ್ರಭಾಕರ ಹೊಳ್ಳರನ್ನು ಅವರ ನಿವಾಸದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ವತಿಯಿಂದ ಇತ್ತೀಚೆಗೆ ಗೌರವಿಸಲಾಯಿತು.
ವೈದ್ಯರೂ , ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿಯೂ ಆದ ಕೆ ಎಸ್ ಕಾರಂತರು ನಾಲ್ಕು ಶತಮಾನದ ಚರಿತ್ರೆ ಹುದುಗಿದ ಕಯ್ಯಾರು ಕಜೆ ಹೊಳ್ಳರ ಆ ಮೂಲ ಮನೆಯ ದೇವರ ಪೀಠದ ಮುಂದೆ ಹಚ್ಚಿದ ದೀಪದ ಮುಂದೆ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು , " ಈ ಬಗೆ ಕುತೂಹಲದ ಅನಾವರಣ ಮಾಡಿದ್ದೀರಿ .94 ರಿಂದ 2006 ಕಾಲಘಟ್ಟದಲ್ಲಿ ಕೂಟ ಮಹಾಜಗತ್ತಿನ ಚುಕ್ಕಾಣಿ ಹಿಡಿದು ಹೊಳ್ಳರು ನಮ್ಮ ಮಾರ್ಗದರ್ಶಕರಾಗಿರುವುದೂ ಅಭಿನಂದನೀಯ " ಎಂದರು .
ಇದೇ ಸಂದರ್ಭ , ಕು. ಶ್ರದ್ಧಾ ಭಟ್ ರಚಿಸಿದ " ವೈದ್ಯ ಯೋಗಿ ಡಾ. ಪ್ರಭಾಕರ ಹೊಳ್ಳ ಎಂಬ ಕೃತಿಯನ್ನು ಡಾ. ರಮಾನಂದ ಬನಾರಿ ಅನಾವರಣ ಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕೂಟ ಮಹಾ ಜಗತ್ತಿನ ಅಧ್ಯಕ್ಷ ಸತೀಶ್ ಹಂದೆ, ಡಾ. ಬಿ ಎಸ್ ರಾವ್ ಉಪಸ್ಥಿತರಿದ್ದರು.
ಕೃತಿರಚನೆ ಮಾಡಿದ ಕು. ಶ್ರದ್ಧಾ ಭಟ್ ಅವರನ್ನು ಲಯನ್ ಲಕ್ಷ್ಮಣ ಅವರು ಅ|ಭಿನಂದಿಸಿದರು. ಗುರು ನಾರಸಿಂಹ ದೇವಸ್ಥಾನದ ಟ್ರಸ್ಟಿ ಶ್ರೀಧರ ರಾವ್ , ಸ್ನೇಹಲತಾ ದಿವಾಕರ ಶುಭ ಹಾರೈಸಿದರು. ನಿವೃತ್ತ ನ್ಯಾಯಾಧೀಶ , ಡಾ ಕೆ ಪಿ ಹೊಳ್ಳರ ಸಹೋದರ ಕೆ ಆರ್ ಹೊಳ್ಳರು ಅಣ್ಣನ ಒಡನಾಟ ಮಾರ್ಗದರ್ಶನಗಳನ್ನು ಸ್ಮರಿಸಿದರು. ಉತ್ತರಾಖಂಡದಲ್ಲಿ ಯಶಸ್ವೀ ವೈದ್ಯಕೀಯ ಸೇವೆಯಲ್ಲಿ ಪ್ರವೃತ್ತಳಾಗಿರುವ ಸಂಧ್ಯಾಕಲಾ ಮಾತನಾಡಿದರು. ಅಶೋಕ ಕುಮಾರ ಹೊಳ್ಳ ಸ್ವಾಗತಿಸಿ, ಡಾ . ರಾಧಾಕೃಷ್ಣ ಬೆಳ್ಳೂರು ನಿರ್ವಹಿಸಿದರು. ವಿಶಾಲಾಕ್ಷ ಪುತ್ರಕಳ ವಂದಿಸಿದರು.




.jpg)

