HEALTH TIPS

ಜನಸಾಮಾನ್ಯರಿಗಿಲ್ಲ ಮತದಾನದ ಹಕ್ಕು!!; ಹಾಗಾದರೆ ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ? ಇಲ್ಲಿದೆ ಮಾಹಿತಿ

 ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿ ಕೊನೆಗೂ ಘೋಷಣೆಯಾಗಿದ್ದು, ಕೇಂದ್ರ ಚುನಾವಣಾ ಆಯೋಗವು ಇಂದು ವೇಳಾಪಟ್ಟಿ ಪ್ರಕಟಿಸಿದೆ. 

ಚುನಾವಣಾ ಆಯೋಗದ ವೇಳಾಪಟ್ಟಿ ಪ್ರಕಾರ ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆಯ ಮತದಾನ ನಡೆಯಲಿದೆ.  ಜುಲೈ 21 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. 

ಜನಸಾಮಾನ್ಯರಿಗಿಲ್ಲ ಮತದಾನದ ಹಕ್ಕು; ಯಾರು ಮತ ಚಲಾಯಿಸುತ್ತಾರೆ?

ಅಧ್ಯಕ್ಷರ ಅಥವಾ ರಾಷ್ಟ್ರಪತಿ ಚುನಾವಣೆಯಲ್ಲಿ ಸಾಮಾನ್ಯ ಜನರಿಗೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಬದಲಿಗೆ ಚುನಾಯಿತ ಜನಪ್ರತಿನಿಧಿಗಳು ಇಲ್ಲಿ ಮತ ಚಲಾಯಿಸುತ್ತಾರೆ. ಹಾಲಿ 2022 ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ಒಟ್ಟು 4,809 ಮತದಾರರು ಮತ ಚಲಾಯಿಸುತ್ತಾರೆ. ಅಂದಹಾಗೆ ಈ ಚುನಾವಣೆಯಲ್ಲಿ ರಾಜ್ಯಸಭಾ ಚುನಾವಣೆಗಳಲ್ಲಿರುವಂತೆ ಯಾವುದೇ ರಾಜಕೀಯ ಪಕ್ಷವು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸುವಂತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. 

ದೇಶದ ಹಾಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಮುಕ್ತಾಯವಾಗಲಿದೆ. ಕೊನೆಯ ಅಧ್ಯಕ್ಷೀಯ ಚುನಾವಣೆಯು 17 ಜುಲೈ 2017 ರಂದು ನಡೆದಿತ್ತು. 2017 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು ಶೇ.50 ರಷ್ಟು ಮತಗಳು ಎನ್‌ಡಿಎ ಪರವಾಗಿ ಇದ್ದವು. ಒಟ್ಟು 4,880 ಮತದಾರರಲ್ಲಿ 4,109 ಶಾಸಕರು ಮತ್ತು 771 ಸಂಸದರು ಮತ ಚಲಾಯಿಸಿದ್ದರು.

ಮತಗಳ ಲೆಕ್ಕಾಚಾರ

ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರ ಮತಗಳ ಮೌಲ್ಯದ ಲೆಕ್ಕಾಚಾರವೆ ಬೇರೆ. ಮೊದಲನೆಯದಾಗಿ, ಎಲ್ಲಾ ರಾಜ್ಯಗಳ ವಿಧಾನಸಭೆಗಳ ಶಾಸಕರ ಮತಗಳ ಮೌಲ್ಯವನ್ನು ಸೇರಿಸಲಾಗುತ್ತದೆ. ಈ ಸಾಮೂಹಿಕ ಮೌಲ್ಯವನ್ನು ರಾಜ್ಯಸಭೆ ಮತ್ತು ಲೋಕಸಭೆಯ ಒಟ್ಟು ಸದಸ್ಯರ ಒಟ್ಟು ಸಂಖ್ಯೆಯಿಂದ ಭಾಗಿಸಲಾಗುತ್ತದೆ. ಈ ರೀತಿಯಲ್ಲಿ ಪಡೆದ ಸಂಖ್ಯೆಯು ಸಂಸದರ ಮತದ ಮೌಲ್ಯವಾಗಿರುತ್ತದೆ.

ದೇಶದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸೇರಿದಂತೆ ಒಟ್ಟು 776 ಸಂಸದರಿದ್ದಾರೆ. ಪ್ರತಿ ಸಂಸದರ ಮತ ಮೌಲ್ಯ 708. ಅಂತೆಯೇ ದೇಶದಲ್ಲಿ ಒಟ್ಟು 4120 ಶಾಸಕರಿದ್ದು, ಪ್ರತಿ ರಾಜ್ಯದ ಶಾಸಕರ ಮತದ ಮೌಲ್ಯ ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಉತ್ತರ ಪ್ರದೇಶದ ಶಾಸಕರೊಬ್ಬರ ಮತದ ಮೌಲ್ಯ 208 ಆಗಿರುತ್ತದೆ. ಯಾವುದೇ ಅಭ್ಯರ್ಥಿ ಅಧ್ಯಕ್ಷರಾಗಲು 549441 ಅಗತ್ಯವಿದೆ. ಶಾಸಕರ ವಿಷಯದಲ್ಲಿ, ಶಾಸಕರು ಇರುವ ರಾಜ್ಯದ ಜನಸಂಖ್ಯೆಯ ಆದರದ ಮೇಲೆ ಪರಿಗಣಿಸಲಾಗುತ್ತದೆ. ಇದರೊಂದಿಗೆ ಆ ರಾಜ್ಯದ ವಿಧಾನಸಭೆಯ ಸದಸ್ಯರ ಸಂಖ್ಯೆಯನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮೌಲ್ಯವನ್ನು ಲೆಕ್ಕಾಚಾರ ಮಾಡಲು, ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯಿಂದ ಭಾಗಿಸಲಾಗುತ್ತದೆ. ಈ ರೀತಿಯಲ್ಲಿ ಬಂದ ಸಂಖ್ಯೆಯನ್ನು 1000 ರಿಂದ ಭಾಗಿಸಲಾಗುತ್ತದೆ. ಭಾಗಿಸಿದ ನಂತರ ಬಂದ ಅಂಕಿ ಅಂಶವೆ ಆ ರಾಜ್ಯದ ಶಾಸಕರೊಬ್ಬರ ಮತದ ಮೌಲ್ಯವಾಗುತ್ತದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆಯುವುದು ಗೆಲುವನ್ನು ನಿರ್ಧರಿಸುವುದಿಲ್ಲ. ಮತದಾರರು ಅಂದರೆ ಸಂಸದರು ಮತ್ತು ಶಾಸಕರ ಮತಗಳ ಒಟ್ಟು ತೂಕದ ಅರ್ಧಕ್ಕಿಂತ ಹೆಚ್ಚಿನದನ್ನು ಪಡೆಯುವವರು ಅಧ್ಯಕ್ಷರಾಗುತ್ತಾರೆ. ಅಧ್ಯಕ್ಷೀಯ ಚುನಾವಣೆಗೆ ಎಲೆಕ್ಟೋರಲ್ ಕಾಲೇಜಿನ ಸದಸ್ಯರ ಒಟ್ಟು ಮತಗಳ ಮೊತ್ತ 1098882 ಆಗಿದೆ. ಅಭ್ಯರ್ಥಿ ಗೆಲ್ಲಲು 549441 ಮತಗಳನ್ನು ಪಡೆಯಬೇಕು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries