HEALTH TIPS

ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿಗೆ ಒಡಿಶಾದ 'ಮೊ ಬಸ್'

 ವಿಶ್ವಸಂಸ್ಥೆ: ಒಡಿಶಾದ ಸಾರ್ವಜನಿಕ ಸಾರಿಗೆ ಸೇವೆ, ಪ್ರತಿಷ್ಠಿತ ವಿಶ್ವಸಂಸ್ಥೆಯ ಪ್ರಶಸ್ತಿಗೆ ಪಾತ್ರವಾದ 10 ಜಾಗತಿಕ ಉಪಕ್ರಮಗಳಲ್ಲಿ ಸೇರಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳುತ್ತಿರುವ ಜಗತ್ತಿಗೆ ನೆರವಾಗುವ ಪ್ರಯತ್ನ ಮತ್ತು ಪಾತ್ರಕ್ಕಾಗಿ ಈ ಗೌರವ ಸಂದಿದೆ.

ಕ್ಯಾಪಿಟಲ್ ರೀಜನ್ ಅರ್ಬನ್ ಟ್ರಾನ್ಸ್‍ಪೋರ್ಟ್ ಇಂಡಿಯಾ, ಯುಎನ್ ಪಬ್ಲಿಕ್ ಸರ್ವೀಸ್ ಅವಾರ್ಡ್‍ಗೆ ಪಾತ್ರವಾಗಿದೆ ಎಂದು ವಿಶ್ವಸಂಸ್ಥೆ ಬುಧವಾರ ಪ್ರಕಟಿಸಿದೆ. ಬ್ರೆಝಿಲ್, ಕೆನಡಾ, ಭಾರತ, ಐರ್ಲೆಂಡ್, ಪನಾಮಾ, ಫಿಲಿಫೀನ್ಸ್, ಪೋಲಂಡ್, ಸೌದಿ ಅರೇಬಿಯಾ, ಥಾಯ್ಲೆಂಡ್ ಮತ್ತು ಉಕ್ರೇನ್‍ನ ಹತ್ತು ಉಪಕ್ರಮಗಳನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಸಾರ್ವಜನಿಕ ಸೇವಾ ವಿತರಣೆಯಲ್ಲಿ ಪ್ರದರ್ಶಿಸಿದ ನಾವೀನ್ಯತೆಗಾಗಿ ಈ ಗೌರವ ನೀಡಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಂಸ್ಥೆ ಬುಧವಾರ ವರ್ಚುವಲ್ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದೆ.

ಕೋವಿಡ್-19 ಸಾಂಕ್ರಾಮಿಕದಿಂದ ಜಗತ್ತು ಚೇತರಿಸಿಕೊಳ್ಳಲು ನೆರವಾದ 10 ಉಪಕ್ರಮಗಳನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಉಪಕ್ರಮಗಳು ಮಕ್ಕಳನ್ನು ಸುರಕ್ಷಿತವಾಗಿರಿಸಲು, ಲಿಂಗ ಸಮಾನತೆಯನ್ನು ತರಲು ಮತ್ತು ನೀರಿನ ಅಡಿಯ ಜೀವಜಗತ್ತನ್ನು ಸಂರಕ್ಷಿಸಲು ನೆರವಾಗಿವೆ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನಾಚರಣೆ ಸಮಾರಂಭದಲ್ಲಿ 2022ನೇ ಸಾಲಿನ ಪ್ರಶಸ್ತಿಯನ್ನು ವಿಶ್ವಸಂಸ್ಥೆಯ ಅಧೀನ ಮಹಾಕಾರ್ಯದರ್ಶಿ ಲಿಯೂ ಝೆನ್‍ಮಿನ್ ಪ್ರಕಟಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries