ಅಗರ್ತಲಾ: ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಢಾಕಾ ಮಾರ್ಗವಾಗಿ ತೆರಳುವ ಅಗರ್ತಲಾ- ಕೋಲ್ಕತ್ತ ನಡುವಿನ ಬಸ್ ಸೇವೆ ಎರಡು ವರ್ಷಗಳ ಬಳಿಕ ಪುನಾರಂಭಗೊಂಡಿದೆ.
0
samarasasudhi
ಜೂನ್ 10, 2022
ಅಗರ್ತಲಾ: ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಢಾಕಾ ಮಾರ್ಗವಾಗಿ ತೆರಳುವ ಅಗರ್ತಲಾ- ಕೋಲ್ಕತ್ತ ನಡುವಿನ ಬಸ್ ಸೇವೆ ಎರಡು ವರ್ಷಗಳ ಬಳಿಕ ಪುನಾರಂಭಗೊಂಡಿದೆ.
ರಾಜ್ಯ ಸಾರಿಗೆ ಸಚಿವ ಪ್ರಣಜಿತ್ ಸಿಂಘಾ ರಾಯ್ ಅವರು ಶುಕ್ರವಾರ ಅಖೌರಾದಲ್ಲಿ ಅಂತರರಾಷ್ಟ್ರೀಯ ಬಸ್ ಸೇವೆಗೆ ಹಸಿರು ನಿಶಾನೆ ತೋರಿದರು.
ಅಗರ್ತಲಾದಿಂದ ಕೋಲ್ಕತ್ತ ವರೆಗಿನ ಸುಮಾರು 500 ಕಿಲೋಮೀಟರ್ ಅಂತರವನ್ನು ಬಸ್ 19 ಗಂಟೆಗಳಲ್ಲಿ ಕ್ರಮಿಸಲಿದೆ.ವಾರದಲ್ಲಿ 6 ದಿನಗಳ ಕಾಲ ಈ ಬಸ್ ಸೇವೆ ಲಭ್ಯವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಪಿಡುಗಿನ ಕಾರಣದಿಂದ 2020ರ ಮಾರ್ಚ್‌ನಿಂದ ಈ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.