ಕೊಚ್ಚಿ: ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನಟ ವಿಜಯ್ ಬಾಬು ಅವರನ್ನು ಪೋಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಬಂಧನವಾದಲ್ಲಿ 5 ಲಕ್ಷ ರೂಪಾಯಿ ಜಾಮೀನು ಮತ್ತು ಇಬ್ಬರ ಶ್ಯೂರಿಟಿ ನೀಡುವಂತೆ ಕೋರ್ಟ್ ಸೂಚಿಸಿತ್ತು. ಎರ್ನಾಕುಳಂ ದಕ್ಷಿಣ ಪೋಲೀಸರು ಬಂಧನವನ್ನು ದಾಖಲಿಸಿಕೊಂಡಿದ್ದಾರೆ.
ಅಗತ್ಯ ಬಿದ್ದರೆ ವಿಜಯ್ ಬಾಬು ಅವರನ್ನು ಬಂಧನ ಮಾಡಬಹುದು ಎಂದು ಕೋರ್ಟ್ ಹೇಳಿತ್ತು. ಇದರ ಆಧಾರದ ಮೇಲೆ ಬಂಧನವಾಗಿದೆ. ನಾಳೆ ಕ್ರೌನ್ ಪ್ಲಾಜಾ, ಮರಡುವಿನ ಫ್ಲಾಟ್ ಮತ್ತು ಪಣಂಪಳ್ಳಿನಗರದ ಫ್ಲ್ಯಾಟ್‍ನಲ್ಲಿ ಸಾಕ್ಷ್ಯಾಧಾರಗಳನ್ನು ತೆಗೆದುಕೊಳ್ಳಲಾಗುವುದು.
ಜೂನ್ 27 ರಿಂದ ಜುಲೈ 3 ರವರೆಗೆ ಅವರನ್ನು ತನಿಖಾ ತಂಡದ ಕಸ್ಟಡಿಯಲ್ಲಿ ಇಡುವಂತೆ ನ್ಯಾಯಾಲಯ ಸೂಚಿಸಿದೆ. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ತನಿಖಾ ತಂಡಕ್ಕೆ ಸಹಕರಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಸಾಕ್ಷ್ಯಾಧಾರಗಳನ್ನು ತೆಗೆದುಕೊಳ್ಳುವ ಜೊತೆಗೆ, ಈ ಅವಧಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯೂ ಇರಬಹುದೆನ್ನಲಾಗಿದೆ.


