ತಿರುವನಂತಪುರ: ಓಣಂ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿತರಿsಸುವ ಓಣಂ ಕಿಟ್‍ನಲ್ಲಿರುವ ವಸ್ತುಗಳ ವಿವರಗಳನ್ನು ಬಿಡುಗಡೆ ಮಾಡಲಾಗಿದೆ. ಕಿಟ್ ಬಟ್ಟೆ ಚೀಲ ಸೇರಿದಂತೆ ಹದಿನಾಲ್ಕು ವಸ್ತುಗಳನ್ನು ಒಳಗೊಂಡಿದೆ. ಓಣಂಗೆ ಆಹಾರ ಕಿಟ್‍ಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೊನ್ನೆ ಘೋಷಿಸಿದ್ದರು. ಓಣಂ ಕಿಟ್ ಗಾಗಿ 425 ಕೋಟಿ ರೂಪಾಯಿ ವೆಚ್ಚವನ್ನು ಸರ್ಕಾರ ನಿರೀಕ್ಷಿಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಹದಿನಾಲ್ಕು ಬಗೆಯ ಓಣಂ ಕಿಟ್‍ನಲ್ಲಿ ಗೇರುಬೀಜ 50 ಗ್ರಾಂ, ಮಿಲ್ಮಾ ತುಪ್ಪ 50 ಮಿಲಿ, ಶಬರಿ ಮೆಣಸಿನ ಪುಡಿ 100 ಗ್ರಾಂ, ಶಬರಿ ಅರಿಶಿನ ಪುಡಿ 100 ಗ್ರಾಂ, ಏಲಕ್ಕಿ 20 ಗ್ರಾಂ, ಶಬರಿ ತೆಂಗಿನೆಣ್ಣೆ 500 ಮಿಲಿ, ಶಬರಿ ಟೀ 100 ಗ್ರಾಂ, ಶರ್ಕರ ಬೆರಟ್ಟಿ 100 ಗ್ರಾಂ, ಸಕ್ಕರೆ ಒಂದು ಕೆಜಿ, ಕುಸಲಕ್ಕಿ ಅರ್ಧ ಕಿಲೋ, ಪಚ್ಚೆಹೆಸರು ಅರ್ಧಕಿಲೋಮತ್ತು 500 ಗ್ರಾಂ ತೊಗರಿಬೇಳೆ ಕಿಟ್ ನಲ್ಲಿ ಇರಲಿದೆ.
ಆರ್ಥಿಕ ಸಂಕಷ್ಟದ ನಡುವೆಯೂ ಈ ವರ್ಷವೂ ಓಣಂಕಿಟ್ ನೀಡಲು ಸರ್ಕಾರ ಉದ್ದೇಶಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸೇರಿದಂತೆ 13 ಬಾರಿ ಕಿಟ್ ವಿತರಣೆಗೆ 5500 ಕೋಟಿ ರೂ.ವಿನಿಯೋಗಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ಕಾಣಿಸಿಕೊಂಡ ಅವಧಿಯಲ್ಲಿ ಸರ್ಕಾರವು ಆಹಾರ ಕಿಟ್‍ಗಳ ವಿತರಣೆಯನ್ನು ಪ್ರಾರಂಭಿಸಿತು. ರೋಗ ಹರಡುವಿಕೆಯಿಂದ ಜೀವನೋಪಾಯವನ್ನು ಕಳೆದುಕೊಂಡವರು ಸೇರಿದಂತೆ ಎಲ್ಲರಿಗೂ ಆಹಾರ ಕಿಟ್ ಪ್ರಯೋಜನಕಾರಿಯಾಯಿತು. ಬಳಿಕ ಕೋವಿಡ್ ತೀವ್ರತೆ ಕಡಿಮೆಯಾದ ಕಾರಣ ಕಿಟ್ ವಿತರಣೆಯನ್ನು ನಿಲ್ಲಿಸಲಾಗಿತ್ತು.
ಓಣಂ ಕಿಟ್ 2022: ಸಕ್ಕರೆಯಿಂದ ತೆಂಗಿನ ಎಣ್ಣೆಯವರೆಗೆ; 14 ಐಟಂಗಳು: ಇಲ್ಲಿವೆ ಮಾಹಿತಿ
0
ಜುಲೈ 28, 2022
Tags


