ಕಾಸರಗೋಡು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಾರ್ತಾ ಕಚೇರಿ ಹಾಗೂ ಕಾಸರಗೋಡು ರೋಟರಿ ಕ್ಲಬ್ ವತಿಯಿಂದ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಹಾಗೂ ರಾಷ್ಟ್ರಗೀತೆ ಸ್ಪರ್ಧೆ ಆ.11ರಂದು ರೋಟರಿ ಭವನದಲ್ಲಿ ನಡೆಯಲಿದೆ. ಒಂದು ತಂಡದಲ್ಲಿ ಏಳು ಮಂದಿಗೆ ಭಾಗವಹಿಸಲು ಅವಕಾಶವಿದ್ದು, ಸಂಗೀತ ವಾದ್ಯ ಬಳಸುತ್ತಿದ್ದರೆ, ಅದೇ ತಂಡ ದೇಶಭಕ್ತಿ ಗೀತೆ ಮತ್ತು ರಾಷ್ಟಗೀತೆ ಹಾಡಬೇಕಾಗಿದೆ.
ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ 5,000, 3,000 ಮತ್ತು 2,000 ರೂಪಾಯಿ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಪಾಲ್ಗೊಳ್ಳುವ ಸ್ಪರ್ಧಾಳುಗಳು ಆಗಸ್ಟ್ 7 ರೊಳಗೆ ಹೆಸರು ಸಲ್ಲಿಸಬೇಕಾಗಿದೆ. ಅಧ್ಯಕ್ಷರು, ಕಾಸರಗೋಡು ರೋಟರಿ ಕ್ಲಬ್, ರೋಟರಿ ಭವನ, ಬ್ಯಾಂಕ್ ರಸ್ತೆ, ಕಾಸರಗೋಡು ಅಥವಾ radhakrishnan.mk54@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿದೆ.
ಸ್ವಾತಂತ್ರ್ಯೋತ್ಸವ: ದೇಶಭಕ್ತಿ, ರಾಷ್ಟ್ರಗೀತೆ ಸ್ಪರ್ಧೆ
0
ಜುಲೈ 28, 2022
Tags

