ಬದಿಯಡ್ಕ: ಮಕ್ಕಳ ಮೃದು ಮನದಲ್ಲಿ ಕನ್ನಡದ ಹಣತೆಯನ್ನು ಹಚ್ಚಿ ಸವಿಗನ್ನಡ ಮನೆಮಾತಾಗುವಂತೆ ಮಾಡೋಣ. ಆ ಮೂಲಕ ನಮ್ಮನ್ನು ಪೆÇರೆವ ಕನ್ನಡ ತಾಯಿಯ ಋಣವನ್ನು ತೀರಿಸೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎಸ್. ವಿ. ಭಟ್ ಕರೆ ನೀಡಿದರು.
ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ವಾಚನಾ ಮಾಸಾಚರಣೆಯ ಅಂಗವಾಗಿ ನಡೆದ ಕನ್ನಡ ಕವಿತಾ ರಚನಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಯಾಗಿದ್ದ ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಮಕ್ಕಳನ್ನು ಹಾಡುಗಳ ಮೂಲಕ ರಂಜಿಸಿ,ಕನ್ನಡ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಲು ಅಗತ್ಯವಾದ ಸಲಹೆ ನೀಡಿ ಮಕ್ಕಳ ಮನ ಗೆದ್ದರು. ಶ್ರೀನಿವಾಸ ಭಟ್ ಸೇರಾಜೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಶಿಬಿರದ ನೇತೃತ್ವ ವಹಿಸಿದ್ದರು. ಮುಖ್ಯೋಪಾಧ್ಯಾಯ ವಿ.ವೆಂಕಟ್ರಾಜ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಬಂಧಕ ಶಂಕರನಾರಾಯಣ ಶರ್ಮ ಹಾಗೂ ವಿದ್ಯಾರಂಗ ಕನ್ವೀನರ್ ಕೃಷ್ಣನ್ ನಂಬೂದಿರಿ ಶುಭÀಹಾರೈಸಿದರು. ಶಾಲಾ ನೌಕರ ಸಂಘದ ಕಾರ್ಯದರ್ಶಿ ಗಣೇಶ ಭÀಟ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಅಧ್ಯಾಪಕ ಪ್ರಶಾಂತ ಕುಮಾರ್ ಬಿ.ವಂದಿಸಿದರು. ಶರತ್ ಕುಮಾರ್ ಎಂ. ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳ ಮನ ಗೆದ್ದ ಕನ್ನಡ ಕವಿತಾ ರಚನೆ ಶಿಬಿರ
0
ಜುಲೈ 28, 2022

.jpg)
