ಮಂಜೇಶ್ವರ: ಶ್ರೀ ವಿದ್ಯಾವರ್ಧಕ ಶಾಲಾ ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯ ಮೀಯಪದವು ಇದರ ಆಶ್ರಯದಲ್ಲಿ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪ್ಲಸ್.ಟು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಬಾಲವೇದಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಗ್ರಂಥಾಲಯ ಅಧ್ಯಕ್ಷ ರಾಮಚಂದ್ರ.ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲಿನ ಕಾರ್ಯದರ್ಶಿ ಡಿ.ಕಮಲಾಕ್ಷ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕ್ಷಯ್ ಎಲಿಯಾಣ ಡಿ.ಎಸ್.ಟಿ ಇನ್ಸ್ಪಾಯರ್ ಫೆಲೋ ಮಂಗಳೂರು ವಿಶ್ವವಿದ್ಯಾನಿಲಯ ಇವರು ಭಾಗವಹಿಸಿ ಮಕ್ಕಳಿಗೆ ಕೇರಿಯರ್ ಗೈಡೆನ್ಸ್ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಅನುಜ್ಞಾಲಕ್ಷ್ಮೀ ಪ್ರಿಯಾ.ಸಿ ಪ್ರತೀಕ್ಷಾ ಡಿ ಶೆಟ್ಟಿ ಸುಮನ ಪ್ರಿಯಾ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಗಳಿಸಿದ ವಿಕ್ರಮ್ ಭಾರದ್ವಜ್ ಹಾಗೂ ಪ್ರಕೃತಿ ಇವರನ್ನು ಸ್ಮರಣಿಕೆ ನೀಡುವುದರ ಮೂಲಕ ಗೌರವಿಸಲಾಯಿತು. ಗ್ರಂಥಾಲಯ ಪದಾಧಿಕಾರಿಗಳಾದ ಸತೀಶ, ಬಿ ಸ್ವಪ್ನ ಭಟ್, ಜನಾರ್ಧನ, ಸುರೇಶ್ ಮೊದಲಾದವರು ಉಪಸ್ಥಿತರಿದ್ದರು. ಗ್ರಂಥಾಲಯ ಕಾರ್ಯದರ್ಶಿ ಸುರೇಶ ಬಂಗೇರ ಸ್ವಾಗತಿಸಿ ಗ್ರಂಥಪಾಲಕಿ ತುಳಸಿ ವಂದಿಸಿದರು.
ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯದಿಂದ ಪ್ರತಿಭಾ ಪುರಸ್ಕಾರ
0
ಜುಲೈ 28, 2022

.jpg)
