ಮಂಜೇಶ್ವರ: ಕೆದುಂಬಾಡಿ ಪ.ವರ್ಗ ಕಾಲನಿ ಕಂಚಿಲಕಟ್ಟೆಯಲ್ಲಿ ಭಾರತ ದೇಶದ ಅತ್ಯುನ್ನತ ಹುದ್ದೆಗೇರಿದ ಆದಿವಾಸಿ ಸಾಧಕಿ ದ್ರೌಪದಿ ಮುರ್ಮು ಗೆ ಅಭಿನಂದನ ಸಭೆಯು ಗೆಳೆಯರ ಬಳಗದ ವತಿಯಿಂದ ನಡೆಯಿತು.
ಮುಖ್ಯ ಅತಿಥಿಗಳಾಗಿ ಸಂಸ್ಕøತ ಭಾರತಿ ಪ್ರತಿμÁ್ಠನದ ಸಂಯೋಜಕ ಎಸ್ ಎಂ ಉಡುಪ ಅವರು ಮಾತಾಡಿ, ದ್ರೌಪದಿ ಮುರ್ಮು ಭಾರತ ದೇಶದ ಚರಿತ್ರೆಯಲ್ಲಿ ಪರಮೊಚ್ಚ ಪಟ್ಟವೇರಿದ ಆದಿವಾಸಿ ಬುಡಕಟ್ಟು ಜನಾಂಗದ ಪ್ರಥಮ ಮಹಿಳೆ ಯಾಗಿದ್ದಾರೆ.ಇವರ ಬಾಳಿನಲ್ಲಿ ಅದೇμÉ್ಟೂೀ ದುರಂತಗಳು ಸಂಭವಿಸಿದಾಗ ಅವುಗಳನ್ನೆಲ್ಲ ದೈರ್ಯವಾಗಿ ಎದುರಿಸಿ ಅಧ್ಯಾಪಿಕೆಯಾಗಿ, ಶಾಸಕಿಯಾಗಿ ರಾಜ್ಯಪಾಲೆಯಾಗಿ ಇದೀಗ ಭಾರತ ದೇಶದ ರಾμÁ್ಟ್ರಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಜೀವನ ಪಥ ಮಾದರಿಯಾದುದು ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ಬದಿಯಡ್ಕ ಮಂಡಲ ಕೋಶಾಧಿಕಾರಿ ಮಹೇಶ್ ವಳಕ್ಕುಂಜ, ಮಂಗಳಾದೇವಿ ಯಕ್ಷಗಾನ ಮೇಳದ ವ್ಯವಸ್ಥಾಪಕ ಎಸ್.ಎ ಐತ್ತಪ್ಪ ವರ್ಕಾಡಿ, ಕಂಚಿಲಕಟ್ಟೆ ಶ್ರೀ ನಾಗದೇವರು ಹಾಗೂ ಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರವಿ ಮುಡಿಮಾರ್, ಉಮಾನಾಥ ಕಂಚಿಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು. ರವಿ ಮುಡಿಮಾರ್ ಸ್ವಾಗತಿಸಿ, ವಂದಿಸಿದರು.
ಕೆದುಂಬಾಡಿ ಕಂಚಿಲಕಟ್ಟೆ ಕಾಲನಿಯಲ್ಲಿ ನೂತನ ರಾಷ್ಟ್ರಪತಿಗೆ ಅಭಿನಂದನಾ ಸಭೆ
0
ಜುಲೈ 28, 2022


