HEALTH TIPS

ಫೈಝಲ್ ಮತ್ತು ಶಬಾನಾ ಫೌಂಡೇಶನ್ ನ ​ನೂತನ ಉಚಿತ ಸಿವಿಲ್ ಸರ್ವೀಸಸ್ ಅಕಾಡೆಮಿ​ಗೆ ಚಾಲನೆ

              ಕೊಚ್ಚಿ :ಕೇರಳದ ಪೆರುಂದಲ್ಮನ್ನ ಮೂಲದ KREA (ಜ್ಞಾನ, ಸಂಪನ್ಮೂಲಗಳು, ಸಬಲೀಕರಣ, ಚಟುವಟಿಕೆ) ಸಹಯೋಗದೊಂದಿಗೆ ​​ಫೈಝಲ್ ಮತ್ತು ಶಬಾನಾ ಫೌಂಡೇಶನ್ ಸ್ಥಾಪಿಸುತ್ತಿರುವ ​​ನೂತನ ಉಚಿತ ಸಿವಿಲ್ ಸರ್ವೀಸಸ್ ಅಕಾಡೆಮಿ​ಗೆ ​ ಶನಿವಾರ ಕ್ಯಾಲಿಕಟ್ ವಿಶ್ವವಿದ್ಯಾಲಯದ ಬಳಿಯ ಚೇಲೆಂಬ್ರಾದಲ್ಲಿರುವ ತುಲಾಹ್ ಇಂಟರ್ನ್ಯಾಷನಲ್ ವೆಲ್ನೆಸ್ ಸೆಂಟರ್‌ನಲ್ಲಿ ​ಚಾಲನೆ ನೀಡಲಾಯಿತು.

            ಮೊದಲ ಬ್ಯಾಚ್‌ನ ಸುಮಾರು 100 ​​ನಾಗರಿಕ ಸೇವೆಗಳ ಆಕಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಅಮೆರಿಕದ ಶ್ವೇತಭವನದ ಮಾಜಿ ರಾಜಕೀಯ ಸಿಬ್ಬಂದಿ ಮತ್ತು ಹಿಲರಿ ಕ್ಲಿಂಟನ್ ಅವರ ದೀರ್ಘಾವಧಿಯ ಸಹಾಯಕಿಯಾಗಿದ್ದ ​​ಹುಮಾ ಅಬೆ​ದಿನ್ ಅವರೊಂದಿಗೆ ಸಂವಾದ ನಡೆಸಿದರು.

ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ವಹಿಸಬೇಕಾದ ಮಹತ್ವದ ಪಾತ್ರವನ್ನು ಹುಮಾ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ನಾಗರಿಕ ಸೇವೆಗಳ ಕಾರಣದಿಂದಾಗಿ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಗುಣಗಳನ್ನು ಮತ್ತು ವ್ಯಕ್ತಿತ್ವವನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.


               ದೇಶದಲ್ಲಿ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳನ್ನು ಬಲಪಡಿಸುವಲ್ಲಿ ನಾಗರಿಕ ಸೇವಾ ಸಿಬ್ಬಂದಿ ಮಹತ್ತರವಾದ ಪಾತ್ರವನ್ನು ವಹಿಸಬೇಕು ಎಂದು ಈ ಸಂದರ್ಭದಲ್ಲಿ ಹುಮಾ ಹೇಳಿದರು.

              ಅವರು ಅಮೆರಿಕಾದ ಶ್ವೇತಭವನದಲ್ಲಿ ತಮ್ಮ ಕೆಲಸ ಕಾರ್ಯಗಳ ಅನುಭವವನ್ನು ಹಂಚಿಕೊಳ್ಳುವ ಮೂಲಕ ನೆರೆದಿದ್ದ ಯುವ ಸಮೂಹವನ್ನು ಪ್ರೇರೇಪಿಸಿದರು. 19 ನೇ ವಯಸ್ಸಿನಲ್ಲಿ ಶ್ವೇತಭವನವನ್ನು ಸೇರಿಕೊಂಡಿದ್ದ ​ತಾನು ದೈನಂದಿನ ಪ್ರಾರ್ಥನೆಗಳನ್ನು ನಿರ್ವಹಿಸಲು ಮತ್ತು ರಂಝಾನ್ ಉಪವಾಸವನ್ನು ಆಚರಿಸಲು ಪ್ರಾರಂಭಿಸಿದಾಗ ಯಾರೂ ​ನನ್ನನ್ನು ತಡೆದಿರಲಿಲ್ಲ. ​ನನ್ನ ಸಹೋದ್ಯೋಗಿಗಳು ​ನನ್ನ ವ್ಯಕ್ತಿತ್ವವನ್ನು ಗೌರವಿಸುತ್ತಾರೆ ಎಂದು​ ಅವರು​ ಹೇಳಿದರು ​. ಯಾರ ಮುಂದೆಯೂ ತಮ್ಮ ವ್ಯಕ್ತಿತ್ವವನ್ನು ಪಣಕ್ಕಿಡದಂತೆ ವಿದ್ಯಾರ್ಥಿಗಳಿಗೆ​ ಅವರು​ ಸಲಹೆ ನೀಡಿದರು.

ಕೆಆರ್‌ಇಎ ಮುಖ್ಯಸ್ಥರಾದ​ ಶಾಸಕ ​ ನಜೀಬ್ ಕಾಂತಪುರಂ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಫೈಝಲ್ ಆಂಡ್ ಶಬಾನಾ ಫೌಂಡೇಶನ್ ಮುಖ್ಯಸ್ಥರಾದ ಫೈಝಲ್ ಕೊಟ್ಟಿಕೊ​ಲ್ಲನ್ ಮತ್ತು​ ಅವರ ಪತ್ನಿ ​ ​​ಶಬಾನಾ ಫೈಝಲ್, ಕೈಗಾರಿಕೋದ್ಯಮಿಗಳಾದ ಎಂ.ವಿ. ಶ್ರೇಯಮ್ಸ್ ಕುಮಾರ್, ಪಿ.ಕೆ. ಅಹಮದ್, ಪ್ರತಿಷ್ಠಾನದ ನಿರ್ದೇಶಕ ಜೋಸೆಫ್ ಸೆಬಾಸ್ಟಿಯನ್ ಮಾತನಾಡಿದರು.​​ ಶಬಾನಾ ಫೈಝಲ್​ ಅವರು ಮಂಗಳೂರಿನ ಖ್ಯಾತ ಉದ್ಯಮಿ, ಹಿರಿಯ ಸಾಮಾಜಿಕ ಧುರೀಣ ದಿವಂಗತ ಬಿ ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರ ಪುತ್ರಿ. ​

                 ಐಎಎಸ್ ಅಧಿಕಾರಿಗಳಾದ ಅಬೂಬಕರ್ ಸಿದ್ದಿಕ್ ಮತ್ತು ಶಾಹಿದ್ ತಿರುವಳ್ಳೂರ್, ಈ ವರ್ಷದ ನಾಗರಿಕ ಸೇವಾ​ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಶಾಹಿನ್ ಜಿತು ಮತ್ತು ಕೆ.ಸಂಗೀತ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಫೈಝಲ್ ಮತ್ತು ಶಬಾನಾ ಫೌಂಡೇಶನ್ ಕೋಝಿಕ್ಕೋಡ್ ನಡಕ್ಕಾವು ಬಾಲಕಿಯರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದಿತ್ತು.​ ಬಳಿಕ ಅದೇ ಮಾದರಿಯನ್ನು 966 ಶಾಲೆಗಳಿಗೆ ವಿಸ್ತರಿಸಲಾಗಿತ್ತು. ​

             ಫೈಝಲ್‌ ಆಂಡ್‌ ಶಭಾನಾ ಫೌಂಡೇಶನ್‌ KREA (Knowledge Resources Empowerment Activity)ಯ ಸಹಯೋಗದೊಂದಿಗೆ ಸಮುದಾಯದ ಅಭಿವೃದ್ಧಿಯ ಲಕ್ಷ್ಯವನ್ನಿಟ್ಟುಕೊಂಡು ಕೇರಳದ ಪೆರುಂದಲ್ಮನ್ನದಲ್ಲಿ ನಾಗರಿಕ ಸೇವಾ ಅಕಾಡೆಮಿಯನ್ನು ಸ್ಥಾಪಿಸುತ್ತಿದೆ. ಕೇರಳದ ಒಟ್ಟು ಏಳು ಜಿಲ್ಲೆಗಳಲ್ಲಿರುವ​ ಅರ್ಹ , ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ​ 100 ಮಂದಿ ನಾಗರಿಕ ಸೇವಾ ಆಕಾಂಕ್ಷಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿದ್ದು, ಆಯ್ಕೆಗೊಂಡವರಿಗೆ ಉಚಿತ ತರಬೇತಿ ನೀಡಲಾಗುತ್ತದೆ. ಈ ಕೇಂದ್ರವು ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. KREA ವನ್ನು ಸ್ಥಾಪಿಸಿದ ಪೆರುಂದಲ್ಮನ್ನ ಶಾಸಕರಾದ ನಜೀಬ್‌ ಕಾಂತಪುರಂ ಜೊತೆಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries