HEALTH TIPS

ಜಿಲ್ಲೆಯ ಹೆಮ್ಮೆಯ ಆಟಗಾರರಾದ ಶ್ರೀಲಕ್ಷ್ಮಿ ಮತ್ತು ಅಲನ್ ಪ್ರಕಾಶ್ ಅವರು ಕೋಝಿಕ್ಕೋಡ್ ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ವುಶು ಚಾಂಪಿಯನ್ ಶಿಪ್ ನಲ್ಲಿ ಕೇರಳ ತಂಡದ ಪರ ಕಣಕ್ಕೆ


              ಕಾಸರಗೋಡು: ಚೆರ್ವತ್ತೂರಿನ ಶ್ರೀಲಕ್ಷ್ಮಿ ಮತ್ತು ಅಲನ್ ಪ್ರಕಾಶ್ ಅವರು ಸೆ.1ರಿಂದ 6ರವರೆಗೆ ಕೋಝಿಕ್ಕೋಡ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ವುಶು ಚಾಂಪಿಯನ್ ಷಿಪ್(ಬಾಕ್ಸಿಂಗ್) ನಲ್ಲಿ ಕೇರಳ ತಂಡದ ಪರವಾಗಿ ಸ್ಪರ್ಧಿಸಲಿದ್ದಾರೆ. ಆಗಸ್ಟ್ 7 ರಂದು ಕೋಝಿಕ್ಕೋಡ್ ನಲ್ಲಿ ನಡೆದಿದ್ದ ರಾಜ್ಯಮಟ್ಟದ ಜ್ಯೂನಿಯರ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದದಿದ್ದರು. ಸ್ಪ್ಪರ್ಧೆಗೆ ಬೇರೆ ರಾಜ್ಯಗಳಿಂದ ಸುಮಾರು 1500 ಸ್ಪರ್ಧಿಗಳು ಅಣಿಯಾಗಲಿದ್ದಾರೆ.
        ಶ್ರೀಲಕ್ಷ್ಮಿ ಅವರು ಈ ಹಿಂದೆ ರಾಜ್ಯ ಮಟ್ಟದಲ್ಲಿ ಸತತವಾಗಿ 5 ಚಿನ್ನ ಗೆದ್ದಿದ್ದಾರೆ ಮತ್ತು ಪಂಜಾಬ್ ಮತ್ತು ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ, ಅಲನ್ ಪ್ರಕಾಶ್ ಹಿಂದೆ ರಾಜ್ಯ ಮಟ್ಟದಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದಾರೆ.
        ಈ ರಾಷ್ಟ್ರೀಯ ಸ್ಪರ್ಧೆಯಲ್ಲಿ ಶ್ರೀಲಕ್ಷ್ಮಿ ಮತ್ತು ಅಲನ್ ಉತ್ತಮ ಭರವಸೆ ಹೊಂದಿದ್ದಾರೆ. ಚೆರ್ವತ್ತೂರು ಅಮ್ಮಿಂಜಿಕ್ಕೋಡ್ ನ ಸುಧಾಕರನ್- ಶ್ರೀಕಲ ದಂಪತಿಗಳ ಪುತ್ರಿಯಾಗಿದ್ದರೆ,  ಅಲನ್ ಚೆರ್ವತ್ತೂರು ಮಾಚಿಪುರಂನ ಜಯಪ್ರಕಾಶ್-ಶೀಜಾ ದಂಪತಿಯ ಪುತ್ರ.
            ಇಬ್ಬರೂ ಕಾಸರಗೋಡಿನ ವುಶು ಅಸೋಸಿಯೇಶನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ತರಬೇತಿ ಕೇಂದ್ರವಾದ ಚೆರ್ವತ್ತೂರಿನ ಗ್ರ್ಯಾಂಡ್ ಮಾಸ್ಟರ್ ಮಾರ್ಷಲ್ ಆಟ್ರ್ಸ್ ಅಕಾಡೆಮಿಯ ವುಶು ಸಾಯಿ ಪ್ರಮಾಣೀಕೃತ ತರಬೇತುದಾರ ಅನಿಲ್ ಮಾಸ್ಟರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜಿಲ್ಲೆಯ ಹಲವು ವುಶು ಆಟಗಾರರು ಹಿಂದಿನ ವರ್ಷಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಮಿಂಚಿದ್ದು, ಈಗಾಗಲೇ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಗ್ರೇಸ್ ಅಂಕಗಳನ್ನು ಪಡೆದು ವುಶು ತರಬೇತಿ ಮೂಲಕ ತಮ್ಮ ವಿದ್ಯಾಭ್ಯಾಸಕ್ಕೆ ಉಪಯುಕ್ತವಾದ ಕ್ರೀಡಾ ಕೋಟಾ ಪ್ರವೇಶ ಪಡೆದಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries