ಮಂಜೇಶ್ವರ: ಮಂಜೇಶ್ವರ ಹೊಸಂಗಡಿಯಲ್ಲಿರುವ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಚೇರಿ ಮೇಲೆ ದಾಳಿ ನಡೆದಿದೆ. ದಾಳಿಕೋರರು ಕಚೇರಿಗೆ ನುಗ್ಗಿ ದೂರದರ್ಶನ ಸೇರಿದಂತೆ ಪೀಠೋಪಕರಣ ಸಹಿತ ಇತರ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.
ನಿನ್ನೆ ಸಂಜೆ ವೇಳೆ ಹಿಂಸಾಚಾರದ ಮಾಹಿತಿ ಹೊರಬಿದ್ದಿದೆ. ಹೊಸಂಗಡಿ ಶ್ರೀ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ನಿನ್ನೆ ಬೆಳಗ್ಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು. ಅಯ್ಯಪ್ಪನ ಮೂರ್ತಿ ಒಡೆದು ಹಿಂದೆ ಎಸೆಯಲಾಗಿದೆ ಎಂದು ವಿಎಚ್ ಪಿ ಮುಖಂಡರು ತಿಳಿಸಿದ್ದಾರೆ. ಎರಡೂ ಕಡೆ ಒಂದೇ ವ್ಯಕ್ತಿಗಳು ಹಿಂಸಾಚಾರ ನಡೆಸಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮುಖಂಡರು ತಿಳಿಸಿದರು.
ಈ ಹಿಂಸಾಚಾರದ ಹಿಂದೆ ಪ್ರದೇಶದ ಶಾಂತಿಯುತ ವಾತಾವರಣವನ್ನು ಹಾಳು ಮಾಡುವ ಕೆಲಸ ಮಾಡುತ್ತಿರುವ ಕೆಲವು ಕೋಮುವಾದಿ ಶಕ್ತಿಗಳ ಕೈವಾಡವಿದೆ ಎಂದು ವಿಎಚ್‍ಪಿ ಜಿಲ್ಲಾ ನಾಯಕತ್ವ ಪ್ರತಿಕ್ರಿಯಿಸಿದೆ. ಕೆಲ ದಿನಗಳಿಂದ ಹೊಸಂಗÀಡಿಯಲ್ಲಿ ವಿಎಚ್‍ಪಿಯನ್ನು ಗುರಿಯಾಗಿಸಿಕೊಂಡು ಕೆಲವರು ಕೋಮುಗಲಭೆ ಎಬ್ಬಿಸಲು ಯತ್ನಿಸುತ್ತಿದ್ದಾರೆ. ಇದರ ಭಾಗವಾಗಿಯೇ ಕಚೇರಿ ಮೇಲೆ ಹಿಂಸಾಚಾರ ನಡೆದಿದೆ ಎಂದು ಮುಖಂಡರು ಗಮನ ಸೆಳೆದರು.
ಹಿಂಸಾಚಾರದ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಯ್ಯಪ್ಪ ಸ್ವಾಮಿ ಸನ್ನಿಧಿಯ ಅಧಿಕಾರಿಗಳು ತಿಳಿಸಿದ್ದಾರೆ. ಪೆÇಲೀಸರ ನಿಷ್ಕ್ರಿಯತೆಯೇ ಇಂತಹ ಹಿಂಸಾಚಾರಕ್ಕೆ ಎಡೆಮಾಡಿಕೊಡುತ್ತದೆ ಎಂದು ಮುಖಂಡರು ತಿಳಿಸಿರುವರು.
ಮಂಜೇಶ್ವರ ಹೊಸಂಗಡಿಯ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಚೇರಿ ಮೇಲೆ ದಾಳಿ: ಕೋಮು ಸಂಘರ್ಷವನ್ನು ಸೃಷ್ಟಿಸುವ ಯೋಜಿತ ಕ್ರಮ ಎಂದ ವಿಎಚ್‍ಪಿ
0
ಆಗಸ್ಟ್ 21, 2022


