HEALTH TIPS

ಲಂಕಾ ಬಂದರಿನಿಂದ ಚೀನಾದ ಅತ್ಯಾಧುನಿಕ ತಂತ್ರಜ್ಞಾನದ ನೌಕೆ ನಿರ್ಗಮನ

 

             ಕೊಲಂಬೊ: ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಶ್ರೀಲಂಕಾದ ಹಂಬAತೋಟ ಬಂದರಿನಲ್ಲಿ ಕಳೆದ ೬ ದಿನಗಳಿಂದ ಲಂಗರು ಹಾಕಿದ್ದ ಚೀನಾದ ಅತ್ಯಾಧುನಿಕ ತಂತ್ರಜ್ಞಾನದ ನೌಕೆ ಸೋಮವಾರ ಸಂಜೆ ೪ ಗಂಟೆಗೆ ಬಂದರಿನಿAದ ನಿರ್ಗಮಿಸಿದೆ ಎಂದು ವರದಿಯಾಗಿದೆ.

‌               ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹದ ಜಾಡು ಪತ್ತೆಹಚ್ಚುವ ತಂತ್ರಜ್ಞಾನದ ಯುವಾನ್ ವಾಂಗ್ ೫ ನೌಕೆಯು, ಚೀನಾ ಲೀಸ್ಗೆ ಪಡೆದಿರುವ ಹಂಬಂತೋಟ ಬಂದರಿಗೆ ಆಗಸ್ಟ್ ೧೧ರಂದು ಆಗಮಿಸುವ ಕಾರ್ಯಕ್ರಮವಿತ್ತು. ಆದರೆ ಭಾರತವು ಭದ್ರತೆಯ ಕುರಿತ ಆತಂಕ ವ್ಯಕ್ತಪಡಿಸಿ ಆಕ್ಷೇಪಿಸಿದ್ದ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧಿಕಾರಿಗಳು ಅನುಮತಿ ನೀಡದ ಕಾರಣ ವಿಳಂಬವಾಗಿತ್ತು. ಆಗಸ್ಟ್ ೧೬ರಂದು ಆಗಮಿಸಿದ್ದ ಚೀನಾ ನೌಕೆ ಮರುಪೂರಣಕ್ಕಾಗಿ ಬಂದರಿನಲ್ಲಿ ಲಂಗರು ಹಾಕಿತ್ತು.

                      ಶ್ರೀಲಂಕಾದ ವಿಶೇಷ ಆರ್ಥಿಕ ವಲಯದಲ್ಲಿ ಸ್ವಯಂಚಾಲಿತ ಗುರುತಿಸುವ ವ್ಯವಸ್ಥೆಯನ್ನು ಚಾಲೂಸ್ಥಿತಿಯಲ್ಲಿ ಇಡಬೇಕು ಮತ್ತು ಯಾವುದೇ ವೈಜ್ಞಾನಿಕ ಸಂಶೋಧನಾ ಕಾರ್ಯ ನಡೆಸಬಾರದು ಎಂಬ ಷರತ್ತಿನ ಮೇರೆಗೆ ಆಗಸ್ಟ್ ೧೬ರಿಂದ ೨೨ರವರೆಗೆ ಹಂಬAತೋಟದಲ್ಲಿ ಲಂಗರು ಹಾಕಲು ಅವಕಾಶ ನೀಡಲಾಗಿದೆ. ಈ ಸಂದರ್ಭ ಚೀನಾದ ರಾಯಭಾರ ಕಚೇರಿ ಕೋರಿದ ಅಗತ್ಯದ ನೆರವನ್ನು ಒದಗಿಸಲಾಗಿದೆ ಎಂದು ಬಂದರು ಅಧಿಕಾರಿಗಳು ಹೇಳಿದ್ದಾರೆ.

              ಚೀನಾದ ನೌಕೆಯ ಭೇಟಿಯ ವಿಷಯವನ್ನು ನಿರ್ವಹಿಸುವಾಗ ನೆರೆಯವರ ಭದ್ರತೆ ಮತ್ತು ಸಹಕಾರಕ್ಕೆ ಅತ್ಯಂತ ಆದ್ಯತೆ ನೀಡಲಾಗುವುದು ಎಂದು ಶ್ರೀಲಂಕಾದ ವಿದೇಶಾಂಗ ಇಲಾಖೆ ಈ ತಿಂಗಳ ಆರಂಭದಲ್ಲಿ ಹೇಳಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries