ತ್ರಿಶೂರ್: ಹೆರಿಗೆ ವಾರ್ಡ್‍ಗೆ ನುಗ್ಗಲು ಯತ್ನಿಸಿದ್ದನ್ನು ತಡೆದÀ ಭದ್ರತಾ ಸಿಬ್ಬಂದಿಗೆ ಡಿವೈಎಫ್‍ಐ ಮುಖಂಡರೊಬ್ಬರು ಅಮಾನುಷವಾಗಿ ಥಳಿಸಿದ್ದಾರೆ.
ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಭದ್ರತಾ ಉದ್ಯೋಗಿ ಬಿಬಿತಾ ಹಲ್ಲೆಗೊಳಗಾದವರು. ಗಾಯಗೊಂಡ ಬಿಬಿತಾಳನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ.
ಘಟನೆ ನಿನ್ನೆ ನಡೆದಿದೆ. ವೈದ್ಯರ ಪರೀಕ್ಷೆ ಸಂದರ್ಭದಲ್ಲಿ ಹೆರಿಗೆ ವಾರ್ಡ್‍ಗೆ ಯಾರನ್ನೂ ಪ್ರವೇಶಿಸಲು ಬಿಡುವುದಿಲ್ಲ. ಇದನ್ನು ಉಲ್ಲಂಘಿಸಿ ಹೆರಿಗೆ ವಾರ್ಡ್ ಪ್ರವೇಶಿಸಿದ್ದಾರೆ. ಇದನ್ನು ಬಿಬಿತಾ ತಡೆದರು. ತನ್ನ ಸಂಬಂಧಿಯನ್ನು ಭೇಟಿ ಮಾಡಲು ಹೋಗುವುದಾಗಿ ಹೇಳಿ ನೌಕರನನ್ನು ತಳ್ಳಿದ್ದಾನೆ.
ಇದನ್ನು ಬಿಬಿತಾ ವಿರೋಧಿಸಿದರು. ಇದರೊಂದಿಗೆ ಅಮಾನುಷವಾಗಿ ಥಳಿಸಿದ್ದಾರೆ. ನಂತರ ಇತರ ಭದ್ರತಾ ಸಿಬ್ಬಂದಿ ಆಗಮಿಸಿ ಡಿವೈಎಫ್‍ಐ ಮುಖಂಡನ ದಾಳಿಯಿಂದ ಬಿಬಿತಾಳನ್ನು ರಕ್ಷಿಸಿದರು.
ಹೆರಿಗೆ ವಾರ್ಡ್‍ಗೆ ನುಗ್ಗುವ ಪ್ರಯತ್ನ; ಅಡ್ಡಗಟ್ಟಿದ ಭದ್ರತಾ ಸಿಬ್ಬಂದಿಗೆ ಡಿವೈಎಫ್‍ಐ ಮುಖಂಡ ಅಮಾನುಷವಾಗಿ ಥಳಿತ
0
ಆಗಸ್ಟ್ 14, 2022





