ಸರ್ಕಾರದ ಸಹಾಯವಿಲ್ಲದೆ ಸಂಬಳ ನೀಡಲಾಗದು: ಕೆಎಸ್‍ಆರ್‍ಟಿಸಿಯಿಂದ ಹೈಕೋರ್ಟ್‍ಗೆ ಅಫಿಡವಿಟ್ ಸಲ್ಲಿಕೆ
0
ಆಗಸ್ಟ್ 24, 2022
ಕೊಚ್ಚಿ: ಕೆ.ಎಸ್.ಆರ್.ಟಿ.ಸಿ. ಯು ಹೈಕೋರ್ಟ್‍ನಲ್ಲಿ ಸರ್ಕಾರದ ನೆರವಿಲ್ಲದೆ ಜುಲೈ ಮತ್ತು ಆಗಸ್ಟ್ ತಿಂಗಳ ಸಂಬಳ ನೀಡಲು ಸಾಧ್ಯವಿಲ್ಲ ಎಂದು ಅಫಿಡವಿತ್ ನೀಡಿದೆ.
ಸಹಾಯಕ್ಕಾಗಿ ಹಲವು ಬಾರಿ ಸರಕಾರದೊಂದಿಗೆ ಮಾತನಾಡಿದ್ದೇವೆ. ಆದರೆ ಕರ್ತವ್ಯ ಪರಿಷ್ಕರಣೆ ಜಾರಿಯಾದ ನಂತರವೇ ಆರ್ಥಿಕ ನೆರವು ನೀಡಲಾಗುವುದು ಎಂಬುದು ಸರ್ಕಾರದ ನಿಲುವಾಗಿದೆ ಎಂದು ಕೆಎಸ್‍ಆರ್‍ಟಿಸಿ ಆಡಳಿತ ಮಂಡಳಿ ಹೈಕೋರ್ಟ್‍ನಲ್ಲಿ ತಿಳಿಸಿದೆ. ಹೈಕೋರ್ಟ್‍ಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಈ ವಿಷಯಗಳನ್ನು ಸ್ಪಷ್ಟಪಡಿಸಲಾಗಿದೆ.
ನ್ಯಾಯಾಲಯದ ಆದೇಶದ ಹೊರತಾಗಿಯೂ ನೌಕರರಿಗೆ ಜುಲೈ ತಿಂಗಳ ವೇತನ ಪಾವತಿಯಾಗದಿರುವ ಕುರಿತು ಕಳೆದ ಬಾರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದಾಗ ಏಕ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಆದೇಶ ಜಾರಿಯಾಗದಿದ್ದರೆ ಸಿಎಂಡಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ. ಕಳೆದ ತಿಂಗಳ ವೇತನ ನೀಡಲು ಕೆಎಸ್‍ಆರ್‍ಟಿಸಿ ಇನ್ನೂ 10 ದಿನ ಕಾಲಾವಕಾಶ ಕೇಳಿದ್ದರೂ ಇನ್ನೂ ವೇತನ ಪಾವತಿಯಾಗಿಲ್ಲ. ಕಳೆದ ತಿಂಗಳ ವೇತನ ಪಾವತಿಸಲು ಕೆಎಸ್‍ಆರ್‍ಟಿಸಿಗೆ ನ್ಯಾಯಾಲಯ ನೀಡಿದ್ದ ಹೆಚ್ಚುವರಿ ಸಮಯ ಆ.22ಕ್ಕೆ ಕೊನೆಗೊಂಡಿದೆ.
Tags





