ಕಾಸರಗೋಡು: ಬಿಜೆಪಿ ಕಾಸರಗೋಡು ಮಂಡಲ ಸಮಿತಿಯ ಆಶ್ರಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಪೆÇೀಸ್ಟ್ ಕಾರ್ಡ್ ಅಭಿಯಾನ ಶನಿವಾರ ಕಾಸರಗೋಡಿನಲ್ಲಿ ಜರುಗಿತು. ನಗರದ ಪ್ರಧಾನ ಅಂಚೆ ಕಚೇರಿ ಎದುರು ಅಂಚೆಪೆಟ್ಟಿಗೆಗೆ ಕಾರ್ಡು ಹಾಕುವ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸಿದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷೆ ಪ್ರಮೀಳಾ ಮಜಲ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಉಪಾಧ್ಯಕ್ಷ ಮಾಧವನ್ ಮಾಸ್ಟರ್, ಕಾರ್ಯದರ್ಶಿಗಳಾದ ಶ್ರೀಧರ ಕೂಡ್ಲು, ಅಶೋಕನ್ ಮಧೂರು, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಾ ಗೋಪಾಲನ್, ಯುವ ಮೋರ್ಚಾ ರಾಜ್ಯ ಮಹಿಳಾ ಸಂಚಾಲಕಿ ಅಂಜು ಜೋಸ್ಪಿ, ಬಿಜೆಪಿ ಕೌನ್ಸಿಲರ್‍ಗಳು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಿಜೆಪಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಕುದುರೆಪಾಡಿ ಸ್ವಾಗತಿಸಿ, ಗುರುಪ್ರಸಾದ್ ಪ್ರಭು ವಂದಿಸಿದರು.
ಪ್ರಧಾನಿ ಹುಟ್ಟುಹಬ್ಬ: ಬಿಜೆಪಿಯಿಂದ ಶುಭಾಶಯ ಕೋರಿ ಅಂಚೆಕಾರ್ಡು ಅಭಿಯಾನ
0
ಸೆಪ್ಟೆಂಬರ್ 18, 2022
Tags


