ಕಾಸರಗೋಡು: ಕೊಟ್ಟಾರಕ್ಕರ ಆಶ್ರಯ ಸಂಕೇತ ಸಭಾ ಕೇಂದ್ರ ಹಾಗೂ ನಿರ್ಗತಿಕರಿಲ್ಲದ ಭಾರತ ಸಮಿತಿ ವತಿಯಿಂದ ತಿರುವನಂತಪುರದಿಂದ ಆರಂಭಗೊಂಡಿರುವ ಮಾದಕ ದ್ರವ್ಯ ವಿರುದ್ಧ ಸಂದೇಶ ಯಾತ್ರೆ ಅ. 2ರಂದು ಕಾಸರಗೋಡಿನ ಚೆರ್ಕಳದಲ್ಲಿ ಸಮಾರೋಪಗೊಳ್ಳಲಿದೆ ಎಂದು ಅನಾಥರಿಕ್ಕದ ಭಾರತ ಸಮಿತಿಯ ರಾಜ್ಯ ಘಟಕ ಕಾರ್ಯದರ್ಶಿ ಕಲಾಯಪುರಂ ಜೋಸ್ ಬುಧವರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಚೆರ್ಕಳ ಪೇಟೆಯಿಂದ ವಿದ್ಯಾರ್ಥಿಗಳು, ಅಧ್ಯಾಪಕರು, ಕುಟುಂಬಶ್ರೀ ಕಾರ್ಯಕರ್ತರು, ಸ್ಟೂಡೆಂಟ್ ಪೊಲೀಸ್, ಜನಪ್ರತಿನಿಧಿಗಳು, ಸಾಮಾಜಿ ಸೇವಾ ಕಾರ್ಯಕರ್ತರನ್ನೊಳಗೊಂಡ ಬೃಹತ್ ಮೆರವಣಿಗೆ, ಸಮಾರಂಭ ನಡೆಯುವ ಸರ್ಕಾರಿ ಹೈಯರ್ ಸೆಕಡಂಡರಿ ಶಾಲಾ ವಠಾರದ ವರೆಗೆ ನಡೆಯಲಿದೆ. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಮೆರವಣಿಗೆಗೆ ಚಲನೆ ನೀಡುವರು. ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸುವರು. ಜಿಲ್ಲೆಯ ಎಲ್ಲ ಶಾಸಕರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಚಿತ್ರರಂಗದ ಪ್ರಮುಖರಾದ ಮೇಜರ್ ರವಿ, ಸಿಜು ವಿಲ್ಸನ್ ಪಾಲ್ಗೊಳ್ಳುವರು. ಜನಪ್ರತಿನಿಧಿಗಳು, ವಿವಿಧ ಸಂಘಟನೆ ಮುಖಂಡರು ಉಪಸ್ಥಿತರಿರುವರು. ಕಲಯಪುರಂ ಜೋಸ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರೊ. ವಿ. ಗೋಪಿನಾಥ್, ಸುಬೈರ್ ಪಡ್ಪು, ದಾಮೋದರನ್ ಮುಟ್ಟತ್ತ್ ಉಪಸ್ಥಿತರಿದ್ದರು.
ತಿರುವನಂತಪುರದಿಂದಜೂನ್ 29ರಂದು ಆರಂಭಗೊಂಡಿರುವ ಜಾಥಾವನ್ನು ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಉದ್ಘಾಟಿಸಿದರು. ರಾಜ್ಯದ ಎಲ್ಲ 140 ವಿಧಾನಸಭಾ ಕ್ಷೇತ್ರಗಳನ್ನು ಸಂಚರಿಸಿ ಅ. 2ರಂದು ಕಾಸರಗೋಡಿಗೆ ತಲುಪಲಿದೆ.
ಮಾದಕ ದ್ರವ್ಯದ ವಿರುದ್ಧ ಸಂದೇಶ ಯಾತ್ರೆ ಸಮಾರೋಪ ಸಮಾರಂಭ, ಸಾರ್ವಜನಿಕ ಸಭೆ
0
ಸೆಪ್ಟೆಂಬರ್ 28, 2022




