ಕಾಸರಗೋಡು: ಗಾಂಧಿ ಜಯಂತಿಯ ಪ್ರಯುಕ್ತ ಪ. ಜಾತಿ ಮತ್ತು ಪ. ಪಂಗಡಗಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಅಕ್ಟೋಬರ್ 2 ರಿಂದ 16 ರವರೆಗೆ ಸಾಮಾಜಿಕ ಏಕತಾದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭ 'ಎಲ್ಲರೂ ಉನ್ನತಿಯತ್ತ' ಎಂಬ ಸಂದೇಶದೊಂದಿಗೆ ಮೆರವಣಿಗೆ ಆಯೋಜಿಸಲಾಗುವುದು. ವಿವಿಧ ಇಲಾಖೆಗಳೊಂದಿಗೆ ಜಂಟಿಯಾಗಿ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮೆರವಣಿಗೆಯ ಅಂಗವಾಗಿ ಬ್ಲಾಕ್ ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ವಿವಿಧ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಶಿಬಿರ, ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಗುವುದು. ಸಮುದಾಯ ಅಧ್ಯಯನ ಕೊಠಡಿಗಳನ್ನೂ ಉದ್ಘಾಟಿಸಲಾಗುವುದು. ಪರಿಶಿಷ್ಟ ಪಂಗಡದ ಕಾಲನಿಗಳಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ ಆಯೋಜಿಸಲಾಗುವುದು
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರ್‍ಚಂದ್ ಅಧ್ಯಕ್ಷತೆ ವಹಿಸಿದ್ದರು. ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಎಸ್. ಮೀನಾರಾಣಿ, ಕಾಸರಗೋಡು ಜಿಲ್ಲ ಪ. ವರ್ಗ ಅಭಿವೃದ್ಧಿ ಅಧಿಕಾರಿ ಎಂ. ಮಲ್ಲಿಕಾ ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಎಸ್ಸಿ-ಎಸ್ಟಿ ನಿಗಮದ ವ್ಯವಸ್ಥಾಪಕ ಟಿ.ವಿ. ಶಾಜಿ ಉಪಸ್ಥಿತರಿದ್ದರು.
ಗಾಂಧೀಜಯಂತಿ ಅಂಗವಾಗಿ ಸಾಮಾಜಿಕ ಏಕತಾ ದಿನಾಚರಣೆ
0
ಸೆಪ್ಟೆಂಬರ್ 28, 2022




