ಕುಂಬಳೆ: ಕುಂಬಳೆ ಆರೋಗ್ಯ ಬ್ಲಾಕ್‍ನ ಖಾಸಗಿ ಆಸ್ಪತ್ರೆ, ಕ್ಲಿನಿಕ್ ಮತ್ತು ಲ್ಯಾಬ್‍ನ ಲ್ಯಾಬ್ ತಂತ್ರಜ್ಞರಿಗೆ ಆರೋಗ್ಯ ಕಾರ್ಯಕ್ರಮಗಳ ಕುರಿತು ತರಬೇತಿ ನೀಡಲಾಯಿತು. ಜಿಲ್ಲಾ ಟಿ.ಬಿ. ಅಧಿಕಾರಿ ಡಾ.ಟಿ.ಪಿ.ಅಮೀನಾ ಉದ್ಘಾಟಿಸಿದರು. ಕುಂಬಳೆ, ಮಧೂರು, ಪುತ್ತಿಗೆ, ಬದಿಯಡ್ಕ, ಎಣ್ಮಕಜೆ, ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾಬ್ ಟೆಕ್ನಿಷಿಯನ್ ಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಕ್ಷಯ, ಮಲೇರಿಯಾ, ಡೆಂಗ್ಯೂ ಜ್ವರ, ಪಿತ್ತಕಾಮಾಲೆ ಮತ್ತು ಟೈಫಾಯಿಡ್ ಪತ್ತೆ ಮಾಡುವುದು ಹೇಗೆ ಮತ್ತು ರೋಗ ತಡೆಗಟ್ಟುವಿಕೆ ಏನು ಎಂಬುದರ ಕುರಿತು ತರಗತಿಗಳನ್ನು ನಡೆಸಲಾಯಿತು.
ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಕೆ.ಆರ್.ದೀಪಕ್ ಮತ್ತು ಜಿ.ಅಕ್ಷಿತಾ ತರಗತಿ ನಡೆಸಿದರು. ಆರೋಗ್ಯ ನಿರೀಕ್ಷಕ ನಿಶಾಮೋಳ್ ಸ್ವಾಗತಿಸಿ, ಕಿರಿಯ ಆರೋಗ್ಯ ನಿರೀಕ್ಷಕ ಸಿ.ಸಿ.ಬಾಲಚಂದ್ರನ್ ವಂದಿಸಿದರು.
ಆರೋಗ್ಯ ಲ್ಯಾಬ್ ತಂತ್ರಜ್ಞರಿಗೆ ತರಬೇತಿ
0
ಸೆಪ್ಟೆಂಬರ್ 28, 2022




.jpg)
