ಬದಿಯಡ್ಕ: ಜೀವಸಂಕುಲದ ಆವಾಸಸ್ಥಾನವಾದ ಭೂಮಿಯನ್ನು ಸಮರ್ಪಕ ರೀತಿಯಲ್ಲಿ ಕಾಪಿಡುವ ಹೊಣೆ ನಾಗರಿಕ ಪ್ರಪಂಚದ್ದಾಗಿದೆ. ಕ್ಯಾಶ್ ಲೆಸ್ ಆರ್ಥಿಕ ವ್ಯವಹಾರಕ್ಕೆ ಪ್ರವೇಶಿಸಿರುವ ನಾವು ಅದಕ್ಕಿಂತಲೂ ಹೆಚ್ಚು ಜವಾಬ್ದಾರಿಯುತರಾಗಿ ಮಾಲಿನ್ಯಮುಕ್ತ-ಪ್ಲಾಸ್ಟಿಕ್ ಮುಕ್ತ ಭವಿಷ್ಯದ ಬಗೆಗೂ ಚಿಂತನೆ ನಡೆಸಬೇಕಿದೆ ಎಂದು ನೀರ್ಚಾಲು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಮುಗು ಜಲಾಯನ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ ತಿಳಿಸಿದರು.
ನಬಾರ್ಡ್ ಕೆ.ಎಸ್.ಡಬ್ಲ್ಯು ಯೋಜನೆ ಕಾಸರಗೋಡು ಹಾಗೂ ಮುಗು ಜಲಾಯನ ಯೋಜನೆಯ ಜಂಟಿ ಆಶ್ರಯದಲ್ಲಿ ನೀರ್ಚಾಲಲ್ಲಿರುವ ಯೋಜನೆಯ ಕಾರ್ಯಾಲಯ ಪರಿಸರದಲ್ಲಿ ನಡೆದ ಮರಳಿ ಮಣ್ಣಿಗೆ ನಮಗಾಗಿ ಮುಂದಿನ ಪೀಳೀಗೆಗಾಗಿ ಅಭಿಯಾನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ಸದಸ್ಯೆ ಜಯಶ್ರೀ ಅವರು ಬಟ್ಟೆಚೀಲ ವಿತರಣೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮಣ್ಣಿಗೆ ಹಾನಿಯೆಸಗುವ ಪ್ಲಾಸ್ಟಿಕ್ ಬಳಕೆಯನ್ನು ಗರಿಷ್ಠಮಟ್ಟದಲ್ಲಿ ನಿಯಂತ್ರಿಸಬೇಕು. ಈ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ಅರಿವಿನೊಂದಿಗೆ ಜಾಗೃತಿ ಅಗತ್ಯವಿದೆ ಎಂದರು.
ಸಿ.ಆರ್.ಡಿ.(ಸೆಂಟರ್ ಪಾರ್ ರಿಸರ್ಚ್ ಆಂಡ್ ಡೆವೆಲಪ್‍ಮೆಂಟ್) ಯೋಜನಾ ಪ್ರಬಂಧಕ ಡಿ.ಕೆ.ನಾರಾಯಣನ್ ನಾಯರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಯೋಜನೆ ಬಗ್ಗೆ ಮಾಹಿತಿ ನೀಡಿದರು. ಮುಗು ಜಲಾಯನ ಯೋಜನೆಯ ಉಪಾಧ್ಯಕ್ಷ ಅಪ್ಪಣ್ಣ ಮಾಸ್ತರ್ ಶುಭಹಾರೈಸಿದರು. ಯೋಜನಾ ನಿರ್ದೇಶಕಿ ಇ.ಸಿ.ರಾಜಿ ಸುಸ್ಥಿರ ಕೃಷಿಯ ಬಗ್ಗೆ ಉಪನ್ಯಾಸ ನೀಡಿದರು. ಮುಗು ಜಲಾಯನ ಯೋಜನೆಯ ಕಾರ್ಯದರ್ಶಿ ಶಿವಪ್ರಸಾದ್ ಸ್ವಾಗತಿಸಿ, ನಾರಾಯಣ ನಾಯ್ಕ ವಂದಿಸಿದರು.
ಕ್ಯಾಶ್ ಲೆಸ್ ವ್ಯವಹಾರಕ್ಕಿಂತ ವೇಗವಾಗಿ ಪ್ಲಾಸ್ಟಿಕ್ ಮುಕ್ತ ವ್ಯವಸ್ಥೆ ಅನುಸರಿಸಬೇಕಿದೆ: ಜಯದೇವ ಖಂಡಿಗೆ: :ಮುಗು ಜಲಾಯನ ಸಮಿತಿಯಿಂದ ಬಟ್ಟೆಚೀಲ ಅಭಿಯಾನ ಸಮಾರಂಭದಲ್ಲಿ ಅಭಿಮತ
0
ಸೆಪ್ಟೆಂಬರ್ 28, 2022




.jpg)
