ಕಾಸರಗೋಡು: ಐಎಂಎ ಕಾಸರಗೋಡು ಶಾಖೆ, ಐಎಪಿ, ಲಯನ್ಸ್ ಕ್ಲಬ್, ಮಹಿಳಾ ವೈದ್ಯರ ವಿಭಾಗ ಹಾಗೂ ಮಾಲಿಕ್‍ದೀನಾರ್ ನಸಿರ್ಂಗ್ ಕಾಲೇಜು ವತಿಯಿಂದ ವಿಶ್ವ ಮಧುಮೇಹ ದಿನವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಸಾಮೂಹಿಕ ನಡಿಗೆಗೆ ಶಾಸಕ ಎನ್.ಎ. ನೆಲ್ಲಿಕುನ್ನು ಧ್ವಜ ತೋರಿಸಿ ಚಾಲನೆ ನೀಡಿದರು. ನಗರದ ವಿವಿಧೆಡೆ ಸಂಚರಿಸಿದ ಸಾಮೂಹಿಕ ನಡಿಗೆ, ನಂತರ ಜನರಲ್ ಆಸ್ಪತ್ರೆ ವಠಾರದಲ್ಲಿ ಸಮಾರೋಪಗೊಂಡಿತು. ಉಪ ಅಧೀಕ್ಷಕ ಡಾ.ಜಮಾಲ್ ಅಹ್ಮದ್ ಎ ಅಧ್ಯಕ್ಷತೆ ವಹಿಸಿದ್ದರು. ಐ.ಎ.ಪಿ ರಾಜ್ಯ ಉಪಾಧ್ಯಕ್ಷ ಡಾ.ಬಿ.ನಾರಾಯಣ ನಾಯ್ಕ್, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಟಿ.ಗಂಗಾಧರನ್ ಮತ್ತು ಮಾಲಿಕ್‍ದಿನಾರ್ ಕಾಲೇಜ್ ಆಫ್ ನಸಿರ್ಂಗ್ ವಿದ್ಯಾರ್ಥಿನಿ ಕುಮಾರಿ ಜೀವಾ ಉಪಸ್ಥಿತರಿದ್ದರು. ಸಾರ್ವಜನಿಕರಿಗಾಗಿ ಡಾ ಪಿ ಕೃಷ್ಣ ನಾಯ್ಕ್ ತರಗತಿ ನಡೆಸಿದರು. ಮಾಳಿಕ್‍ದಿನಾರ್ ವಿದ್ಯಾರ್ಥಿಗಳಿಂದ ಫ್ಲ್ಯಾಶ್ ಮಾಬ್ ಮತ್ತು ನಸಿರ್ಂಗ್ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು. ಐಎಂಎ ಸಭಾಂಗಣದಲ್ಲಿ ಸಂಜೆ ವೈದ್ಯರಿಗೆ ಡಾ. ಮೊಯ್ದೀನ್‍ಕುಞÂ ಐ.ಕ್ಯೂ ತರಗತಿ ನಡೆಸಿದರು. ಐಎಂಎ ಕಾಸರಗೋಡಿನ ಡಾ.ಗಣೇಶ್ ಮಯ್ಯ ಸ್ವಾಗತಿಸಿದರು.
ವಿಶ್ವಾದ್ಯಂತ ಜೀವನಶೈಲಿ ಕಾಯಿಲೆಯಾದ ಮಧುಮೇಹ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ ದಿನವನ್ನು ಆಚರಿಸುತ್ತದೆ.
ವಿಶ್ವ ಮಧುಮೇಹ ದಿನಾಚರಣೆ, ಸಾಮೂಹಿಕ ನಡಿಗೆ, ಜಾಗೃತಿ ಕಾರ್ಯಕ್ರಮ
0
ನವೆಂಬರ್ 15, 2022
Tags





