ಕಾಸರಗೋಡು: ಸೇವೆಯಿಂದ ನಿವೃತ್ತರಾದ ಕಾಸರಗೋಡು ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ಟಿ.ಕೆ.ರಮೇಶ್ ಕುಮಾರ್ ಅವರಿಗೆ ನ್ಯಾಯಾಲಯದ ಸಿಬ್ಬಂದಿ ವರ್ಗ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ನ್ಯಾಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಶಿರಸ್ತೇದಾರ್ ಮೋಹನ್ ದಾಸ್ ಎಂಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಿಬ್ಬಂದಿ ವರ್ಗದವರು ಕೊಡಮಡಿದ ಸ್ಮರಣಿಕೆಯನ್ನು ಟಿ.ಕೆ ರಮೇಶ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು. ಬೀಳ್ಕೊಡುಗೆ ಸಮಾರಂಭದಲ್ಲಿ ಜಗದೀಶ್ ಪ್ರಸಾದ್ ಇ.ಬಿ, ಸುಕುಮಾರನ್ ಎ.ವಿ, ಚಂದ್ರನ್ ಪಿ, ಮಾಲತಿ.ಎಂ ಉಪಸ್ಥಿತರಿದ್ದರು. ಸಿಬ್ಬಂದಿ ಕಾರ್ಯದರ್ಶಿ ಫಿಲಿಪ್ ಜೆ ಸ್ವಾಗತಿಸಿದರು. ಜಯ ಎಂ.ಆರ್ ವಂದಿಸಿದರು.
ಕುಟುಂಬ ನ್ಯಾಯಾಲಯ ನ್ಯಾಯಾಧೀಶಗೆ ಬೀಳ್ಕೊಡುಗೆ
0
ನವೆಂಬರ್ 15, 2022
Tags





