ಕಾಸರಗೋಡು: ಕೇರಳ ರಾಜ್ಯ ಮೃಗಸಂರಕ್ಷಣಾ ಇಲಾಖೆ ವತಿಯಿಂದ ಜಾನುವಾರುಗಳ ಕಾಲುಬಾಯಿ ರೋಗ ನಿಯಂತ್ರಣ ಹಿನ್ನೆಲೆಯಲ್ಲಿ ಮೂರನೇ ಸುತ್ತಿನ ಕಾಲು ಮತ್ತು ಬಾಯಿ ಲಸಿಕೆ ವಿತರಣಾ ಕಾರ್ಯ ಮಂಗಳವಾರ ಆರಂಭಗೊಂಡಿತು.
ಡಿ.8ರವರೆಗೆ ನಡೆಯಲಿರುವ ಲಸಿಕಾ ಅಭಿಯಾನವನ್ನು ರಾವಣೀಶ್ವರಂ ಪಶು ಆಸ್ಪತ್ರೆಯಲ್ಲಿ ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಶಿಬಿರದಲ್ಲಿ ಅಥವಾ ಸ್ಥಳೀಯ ಸಮಿತಿಗಳು ನಿರ್ಧರಿಸಿದಂತೆ ಮನೆಗಳಿಗೆ ತೆರಳಿ ಲಸಿಕೆ ಹಾಕಲಾಗುತ್ತದೆ. ಜಿಲ್ಲೆಯಲ್ಲಿ 73968 ದನ, 1506 ಎಮ್ಮೆಗಳಿವೆ. ಚುಚ್ಚುಮದ್ದು ನೀಡಿದ ನಂತರ 12-ಅಂಕಿಯ ಕಿವಿಯೋಲೆ(ಟ್ಯಾಗ್)ಯನ್ನು ಜಾನುವಾರುಗಳ ಕಿವಿಗೆ ಚುಚ್ಚಲಾಗುತ್ತದೆ.
ಜಾನುವಾರುಗಳ ಕಾಲುಬಾಯಿರೋಗ: ಜಿಲ್ಲೆಯಲ್ಲಿ ಚುಚ್ಚುಮದ್ದು ವಿತರಣಾಕಾರ್ಯ ಆರಂಭ
0
ನವೆಂಬರ್ 15, 2022
Tags




