HEALTH TIPS

ಕಾಸರಗೋಡು ಉಪಜಿಲ್ಲಾ 61ನೇ ಶಾಲಾ ಕಲೋತ್ಸವಕ್ಕೆ ಚಾಲನೆ-ಇಂದು ಸಮಾರೋಪ


              ಕಾಸರಗೋಡು: ಉಪಜಿಲ್ಲಾ 61ನೇ ಶಾಲಾ ಕಲೋತ್ಸವ ಕಾಸರಗೋಡು ಬಿ.ಇ.ಎಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊಂಡಿತು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಕಲೋತ್ಸವ ಉದ್ಘಾಟಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭಾ ಸದಸ್ಯ ವಿ..ಎಂ ಮುನೀರ್, ನಗರಸಭಾ ಸದಸ್ಯೆ ಶ್ರೀಲತಾ ಎಂ ಮುಖ್ಯ ಭಾಷಣ ಮಾಡಿದರು.
               ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಐ.ಎ.ಎಸ್ ಧ್ವಜಾರೋಹಣ ನಡೆಸಿದರು. ಕನ್ನಡ ಚಲನಚಿತ್ರರಂಗದ ಖ್ಯತ ನಟ ಶಿವಧ್ವಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಿ.ಇ.ಎಂ ಶಿಕ್ಷಣ ಸಂಸ್ಥೆ ಕಾರ್ಪೋರೇಟ್ ಮೆನೇಜರ್ ವಂದನೀಯ ಸುನಿಲ್ ಪುದಿಯಾಟ್ಟಿಲ್ ಆಶೀರ್ವಚನ ನೀಡಿದರು. ಈ ಸಂದರ್ಭ ಕಲೋತ್ಸವ ಲಾಂಛನ ತಯಾರಿಸಿದ ಪಿ.ರತೀಶ್ ಕುಮಾರ್, ನಿವೃತ್ತ ಪ್ರಾಂಶುಪಾಲ ಗೋಪಿ ಮರಙËಡ್, ಶಿಕ್ಷಕ ಅಬ್ದುಲ್ ರಹಮಾನ್ ಪಾಣತ್ತೂರ್ ಅವರನ್ನು ಗೌರವಿಸಲಾಯಿತು. ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾಡ್, ಜನಪ್ರತಿನಿಧಿಗಳು, ವಿವಿಧ ಸಾಮಾಜಿಕ, ಸಾಂಸ್ಕøತಿತಿಕ, ಸಾಹಿತ್ಯಿಕ ರಂಗದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಒಟ್ಟು 13ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆಯುತ್ತಿದೆ.
            ನ. 16ರಂದು ನಡೆಯಲಿರುವ ಸಮಾರೋಪ ಸಮಾರಂಭವನ್ನು ಶಾಸಕ ಸಿ.ಎಚ್ ಕುಞಂಬು ಉದ್ಘಾಟಿಸುವರು. ಶಾಲಾ ಹಳೇ ವಿದ್ಯಾರ್ಥಿ ಯು.ತಾರಾನಾಥ ಆಳ್ವ, ಚಿತ್ರನಟ ಕಾಸರಗೋಡು ಚಿನ್ನಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು.  


       
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries