ಬದಿಯಡ್ಕ: ಪೆರಡಾಲ ನವಜೀವನ ಶಾಲೆಯ ಎನ್.ಸಿ.ಸಿ ಘಟಕದ ನೇತೃತ್ವದಲ್ಲಿ ವಿಶೇಷಚೇತನರ ಮಾತೃಶಾಲೆ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಬಳಿಕ ಸ್ಮರಣಿಕೆ ನೀಡಿ ಕೇಕ್ ಕತ್ತರಿಸಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಕವನವಾಚನ ನಡೆಯಿತು. ಮುಖ್ಯೋಪಾಧ್ಯಾಯಿನಿ ಮಿನಿ ಟೀಚರ್, ಹಿರಿಯ ಅಧ್ಯಾಪಕಿ ಮಾಲತಿ ಟೀಚರ್, ಉರ್ಮಿಳಾ ಟೀಚರ್, ಶ್ರೀನಿವಾಸ ಮಾಸ್ತರ್, ನೌಕರ ಸಂಘದ ಕಾರ್ಯದರ್ಶಿ ಕಾರ್ತಿಕ ಟೀಚರ್, ಎನ್.ಸಿ.ಸಿ ಯೋಜನಾಧಿಕಾರಿ ಕೃಷ್ಣ ಯಾದವ್, ನಾರಾಯಣ ಆಸ್ರ, ಹರೀಶ್ ಎಸ್.ಕೆ., ನಿರಂಜನ ರೈ ಪೆರಡಾಲ, ರಾಜೇಶ್ ಮಾಸ್ತರ್, ಅನಿತಾ ಟೀಚರ್, ನಾರಾಯಣ ಎಂ, ನಟರಾಜ್ ಮಾಸ್ತರ್ ಉಪಸ್ಥಿತರಿದ್ದರು.
ಪೆರಡಾಲ ನವಜೀವನ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ
0
ನವೆಂಬರ್ 15, 2022

.jpg)
.jpg)
