ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಹಿಂದಿ ಅಧ್ಯಾಪಕ್ ಮಂಚ್(ಎಚ್.ಎ.ಎಂ) ಸಮ್ಮೇಳನ ಬಿ. ಆರ್. ಸಿ ಮಂಜೇಶ್ವರದಲ್ಲಿ ಇತ್ತೀಚೆಗೆ ನಡೆಯಿತು.
ಸಮಾರಂಭವನ್ನು ಎಚ್.ಎ.ಎಂ. ಜಿಲ್ಲಾಧ್ಯಕ್ಷ ಮುರಳಿಧರನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅನೇಕ ಹಿಂದಿ ಅಧ್ಯಾಪಕರನ್ನು ತಯಾರು ಮಾಡಿದ ಹಾಗೂ ಹಿಂದಿ ಪ್ರಚಾರಕರೂ ಆದ ಮೀಯಪದವು ಎ. ಯು. ಪಿ. ಶಾಲಾ ಅಧ್ಯಾಪಕ ರಾಮಚಂದ್ರ ಕೆ.ಎಂ. ಅವರನ್ನು ಸನ್ಮಾನಿಸಲಾಯಿತು.
ಹಿಂದಿ ಅಧ್ಯಾಪಕ ಸಂಘ ಮಂಜೇಶ್ವರ ಉಪಜಿಲ್ಲಾ ಶೈಕ್ಷಣಿಕ ಸಲಹೆಗಾರೆ ಪರಮೇಶ್ವರಿ ಟೀಚರ್ ಹಾಗೂ ಹಿಂದಿ ಅಧ್ಯಾಪಕ ಸಂಘ ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಸ್ವಪ್ನಾ ಟೀಚರ್ ಶುಭಹಾರೈಸಿದರು. ಮಂಜೇಶ್ವರ ಉಪಜಿಲ್ಲೆಯ ಎಲ್ಲಾ ಹಿಂದಿ ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜ್ಯೋತಿ ಟೀಚರ್ ಸ್ವಾಗತಿಸಿ, ರಿಚರ್ಡ್ ಡಿಸೋಜಾ ವಂದಿಸಿದರು. ಸುಕನ್ಯಾ ಟೀಚರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಹಿಂದಿ ಅಧ್ಯಾಪಕ ಮಂಚ್ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ
0
ನವೆಂಬರ್ 15, 2022
Tags

.jpg)
