ಕುಂಬಳೆ: ವಿಶ್ವ ಮಧುಮೇಹ ದಿನದ ಅಂಗವಾಗಿ ಕುಂಬಳೆ ಪೋಲೀಸ್ ಠಾಣೆಯ ಪೋಲೀಸ್ ಅಧಿಕಾರಿಗಳು ಜೀವನಶೈಲಿ ತಪಾಸಣಾ ಶಿಬಿರ ನಡೆಯಿತು. ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಪೋಲೀಸ್ ಠಾಣೆಯಲ್ಲಿ ನಡೆದ ಶಿಬಿರವನ್ನು ಪೋಲೀಸ್ ನಿರೀಕ್ಷಕ ಪಿ.ಪ್ರಮೋದ್ ಉದ್ಘಾಟಿಸಿದರು. ಮಧುಮೇಹ, ರಕ್ತದೋತ್ತಡ, ಬಿ.ಎಂ.ಐ ಹಾಗೂ ಕಣ್ಣಿನ ತಪಾಸಣೆ ಮಾಡಲಾಯಿತು. ವೈದ್ಯಾಧಿಕಾರಿ ಡಾ.ದಿವಾಕರ ರೈ ಜೀವನಶೈಲಿ ರೋಗ ಕುರಿತು ತರಗತಿ ನಡೆಸಿದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಎಸ್‍ಐಗಳಾದ ರಾಮಕೃಷ್ಣನ್, ಟಿ.ವಾಮನ, ರಾಜೀವ್ ಕುಮಾರ್, ಎಎಸ್‍ಐಗಳಾದ ಕೆ.ವಿ.ಪ್ರಭಾಕರನ್, ಜೋಮಿ ಜೋಸೆಫ್, ಸಿ.ಪ್ರಭಾಸನ್, ಕೆ.ಗೋಪಾಲ, ಕಿರಿಯ ಆರೋಗ್ಯ ನಿರೀಕ್ಷಕ ಆದರ್ಶ್, ಕಿರಿಯ ಸಾರ್ವಜನಿಕ ಆರೋಗ್ಯ ಅಧಿಕಾರಿ ಎಸ್.ಶಾರದ, ಸಬೀನಾ, ಆಶಾ ಕಾರ್ಯಕರ್ತೆಯರಾದ ನವಿತ, ಸರಳಾ ಉಪಸ್ಥಿತರಿದ್ದು ಮಾತನಾಡಿದರು.
ಕುಂಬಳೆ ಪೋಲೀಸ್ ಠಾಣೆಯಲ್ಲಿ ಜೀವನಶೈಲಿ ರೋಗ ತಪಾಸಣಾ ಶಿಬಿರ
0
ನವೆಂಬರ್ 15, 2022
Tags

.jpg)
