ಕಾಸರಗೋಡು: ಜಿಲ್ಲೆಯ 11 ಸಹಕಾರಿ ಸಂಘ/ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಸಾಲಕ್ಕೆ ಪರಿಹಾರ ನೀಡಲಾಗಿದೆ. ಸಹಕಾರಿಗಳ ಜಂಟಿ ನಿಬಂಧಕರು (ಸಾಮಾನ್ಯ) ಮಾತನಾಡಿ, ಸರ್ಕಾರದ ಆದೇಶದ ಆಧಾರದ ಮೇಲೆ ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕ್‍ಗಳಿಂದ 272 ಫಲಾನುಭವಿಗಳಿಗೆ 1.27 ಕೋಟಿ ರೂ.ಪರಿಹಾರ ನೀಡಲಾಗಿದೆ ಎಂದಿರುವರು. ಈ ಕ್ರಮವು ಕೇರಳ ರೈತರ ಋಣ ಪರಿಹಾರ ಆಯೋಗ ನೀಡಿದ ಮಾನದಂಡ ಆಧರಿಸಿದೆ. ಸಾಲ ಪರಿಹಾರ ಪಡೆದ ಫಲಾನುಭವಿಗಳ ಹೆಸರು ಮತ್ತು ವಿಳಾಸವನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲು ಸಹಕಾರಿ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದ್ದು, ಫಲಾನುಭವಿಗಳು ಅದನ್ನು ಪರಿಶೀಲಿಸಿ ದೃಢೀಕರಿಸಬಹುದು ಎಂದು ಜಂಟಿ ನಿಬಂಧಕರು (ಸಾಮಾನ್ಯ) ಮಾಹಿತಿ ನೀಡಿದರು.
ಕೃಷಿ ಸಾಲ ಪರಿಹಾರ
0
ಡಿಸೆಂಬರ್ 08, 2022




