ಬದಿಯಡ್ಕ: ಕುಂಬ್ಡಾಜೆ ಪಂಚಾಯತ್ ನಲ್ಲಿ ಜನಪ್ರಿಯ ಯೋಜನೆಯಡಿ ಜಾನುವಾರು ವಿತರಣೆ ಆರಂಭವಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆದಾಯದ ಮೂಲವಾಗಿ ಎಮ್ಮೆ ಕರುಗಳ ವಿತರಣೆ ಯೋಜನೆ ಜಾರಿಗೊಳಿಸಲಾಗಿದೆ.
ಕುಂಬ್ಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಪೆÇಸೋಳಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. 10.40 ಲಕ್ಷ ವೆಚ್ಚದಲ್ಲಿ 52 ಮುರಾ ತಳಿಯ ಕರುಗಳನ್ನು ಶೇ.50 ಸಬ್ಸಿಡಿ ದರದಲ್ಲಿ ವಿತರಿಸಲಾಯಿತು. ಹರ್ಯಾಣದಿಂದ ಎಮ್ಮೆ ಮರಿಗಳನ್ನು ವಿತರಿಸಲು ತರಲಾಗಿತ್ತು. ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಅಬ್ದುಲ್ ರಜಾಕ್, ಖದೀಜಾ, ಸಂಜೀವ ಶೆಟ್ಟಿ, ಸದಸ್ಯರಾದ ಸುಹರಾ, ಮುಮ್ತಾಜ್, ಕಾರ್ಯದರ್ಶಿ ಕೆ.ಹರೀಶ್, ಪಶು ವೈದ್ಯಾಧಿಕಾರಿ ಎಲ್.ಶ್ರೀಲಾ, ಲೈವ್ ಸ್ಟಾಕ್ ಇನ್ಸ್ ಪೆಕ್ಟರ್ ಆದರ್ಶ, ಖರೀದಿ ಸಮಿತಿ ಸದಸ್ಯ ಎಸ್.ಮಹಮ್ಮದ್ ಮತ್ತಿತರರು ಭಾಗವಹಿಸಿದ್ದರು.
ಕುಂಬ್ಡಾಜೆಯಲ್ಲಿ ಎಮ್ಮೆ ಕರುಗಳ ವಿತರಣೆ ಆರಂಭ
0
ಡಿಸೆಂಬರ್ 08, 2022





