ಕಾಸರಗೋಡು: ಕಾಞಂಗಾಡ್ ಮೂರನೇ ಮೈಲಿಗಲ್ಲಿನಲ್ಲಿ ಚಟುವಟಿಕೆ ನಡೆಸುತ್ತಿರುವ ಸನಾತನ ಧರ್ಮ ಅಧ್ಯಯನ ಕೇಂದ್ರದ ಆಚಾರ್ಯ ಸ್ವಾಮಿ ಭೂಮಾನಂದಪುರಿ (60) ನಿಧನರಾದರು.
ಇವರು ಕೊಳತ್ತೂರು ಅದ್ವೈತಾಶ್ರಮ ಮುಖ್ಯಸ್ಥ ಸ್ವಾಮಿ ಚಿದಾನಂದಪುರಿ ಅವರ ಶಿಷ್ಯರಾಗಿದ್ದಾರೆ.
ವಾರದ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇವರು ಆಶ್ರಮದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. 2010 ರಲ್ಲಿ ಶ್ರೀ ಶಂಕರಂ ಸ್ಟಡಿ ಸೆಂಟರ್ ಆರಂಭಿಸಿ, ವೇದ, ಸಂಸ್ಕøತ ಮತ್ತು ವ್ಯಾಕರಣ ಕಲಿಸುತ್ತಿದ್ದರು. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಹಲವು ದೇವಸ್ಥಾನಗಳಲ್ಲಿ ಆಧ್ಯಾತ್ಮಿಕ ಉಪನ್ಯಾಸ ನೀಡುತ್ತಿದ್ದರು. ಇವರು ಕಣ್ಣೂರಿನ ಕೂತುಪರಂಬ ಮೂಲದವರಾಗಿದ್ದು, ದಿವಂಗತ ಕಣ್ಣನ್ ಮತ್ತು ಕಲ್ಯಾಣಿ ದಂಪತಿಯ ಪುತ್ರರಾಗಿದ್ದಾರೆ.
ಸನಾತನ ಧರ್ಮ ಅಧ್ಯಯನ ಕೇಂದ್ರದ ಆಚಾರ್ಯ ಸ್ವಾಮಿ ಭೂಮಾನಂದಪುರಿ ಸಮಾಧಿ
0
ಡಿಸೆಂಬರ್ 08, 2022





