HEALTH TIPS

ಟಾನ್ಸಿಲಿಟಿಸ್ ಲಕ್ಷಣಗಳೇನು? ತಡೆಗಟ್ಟಲು ಏನು ಮಾಡಬೇಕು?

 ಕೆಲವರಲ್ಲಿ ಟಾನ್ಸಿಲಿಟಿಸ್ ಸಮಸ್ಯೆ ಕಂಡು ಬರುತ್ತದೆ, ಟಾನ್ಸಿಲಿಟಿಸ್ ಎಂದರೆ ನಮ್ಮ ಟಾನ್ಸಿಲ್ ಗ್ರಂಥಿಗೆ ಸೋಂಕು ತಗುಲಿ ಉಂಟಾಗುವ ತೊಂದರೆಯಾಗಿದೆ. ಈ ಟಾನ್ಸಿಲ್‌ ಗ್ರಂಥಿ ನಾವು ಉಸಿರನ್ನು ತೆಗೆದುಕೊಂಡಾಗ ಅನ್ನು ಶುದ್ಧೀಕರಿಸುವ ಕಾರ್ಯ ಮಾಡುತ್ತದೆ. ಸೋಂಕಾಣುಗಳು, ಬ್ಯಾಕ್ಟಿರಿಯಾಗಳು ಇವುಗಳ ವಿರುದ್ಧ ಹೋರಾಡುವುದು. ಆದರೆ ಕೆಲವೊಮ್ಮೆ ಈ ಟಾನ್ಸಿಲ್‌ಗೆ ಸೋಂಕು ತಗುಲುತ್ತದೆ, ಇದರಿಂದ ಉರಿಯೂತ, ಊತ ಈ ಬಗೆಯ ಸಮಸ್ಯೆ ಉಂಟಾಗುವುದು.

ಈ ಟಾನ್ಸಿಲಿಟಿಸ್‌ ಸಮಸ್ಯೆ ಸರ್ವೇ ಸಾಮಾನ್ಯವಾಗಿದ್ದು ಮಕ್ಕಳಿಗೆ ಪದೇ ಪದೇ ಕಾಡುತ್ತಿರುತ್ತದೆ.

ಸಾಮಾನ್ಯವಾಗಿ 3 ಬಗೆಯ ಟಾನ್ಸಿಲಿಟಿಸ್ ಕಂಡು ಬರುತ್ತದೆ

* ಅಕ್ಯೂಟ್‌ ಟಾನ್ಸಿಲಿಟಿಸ್: ಇದು ನಿಮಗೆ 3-4 ದಿನಗಳಿಂದ ಎರಡು ವಾರಗಳವರೆಗೆ ಇರುತ್ತದೆ * ರಿಕರೆಂಟ್‌ ಟಾನ್ಸಿಲಿಟಿಸ್: ಇದರಲ್ಲಿ ನಿಮಗೆ ಪದೇ ಪದೇ ಟಾನ್ಸಿಲಿಟಿಸ್ ಕಾಡುತ್ತಲೇ ಇರುತ್ತದೆ. * ಕ್ರೋನಿಕ್‌ ಟಾನ್ಸಿಟಿಲಿಸ್‌: ಇದರಲ್ಲಿ ಟಾನ್ಸಿಲಿಟಿಸ್‌ ಬಂದ್ರೆ ಬೇಗನೆ ಗುಣಮುಖವಾಗುವುದಿಲ್ಲ.

ಟಾನ್ಸಿಲಿಟಿಸ್ ಲಕ್ಷಣಗಳೇನು?

* ತುಂಬ ಗಂಟಲು ನೋವು

* ಜ್ವರ

* ಟಾನ್ಸಿಲಿಟಿಸ್‌ನಲ್ಲಿ ಹಳದಿ ಅಥವಾ ಬಿಳಿ ಕೋಟಿಂಗ್‌ ರೀತಿ ಕಂಡು ಬರುವುದು.

* ಟಾನ್ಸಿಲಿಟಿಸ್ ಕೆಂಪಾಗುವುದು

* ತಲೆನೋವು

* ಹೊಟ್ಟೆ ಹಾಳಾಗುವುದು

* ಕಿವಿನೋವು

* ನುಂಗಲು ಕಷ್ಟವಾಗುವುದು

* ಚಳಿಜ್ವರ

* ಬಾಯಿ ದುರ್ವಾಸನೆ

* ಕರ್ಕಶ ಧ್ವನಿ (ಧ್ವನಿ ಒಡೆಯುವುದು)

* ಕುತ್ತಿಗೆ ಬಿಗಿಯಾಗುವುದು

ಮಕ್ಕಳಲ್ಲಿ ಟಾನ್ಸಿಲಿಟಿಸ್‌ ಲಕ್ಷಣಗಳು

* ಹೊಟ್ಟೆ ಹಾಳಾಗುವುದು

* ವಾಂತಿ

* ಹೊಟ್ಟೆ ನೋವು

*ತಿನ್ನಲು, ಕಷ್ಟವಾಗುವುದು

ಟಾನ್ಸಿಲಿಟಿಸ್‌ಗೆ ಕಾರಣಗಳೇನು?

* ಅಡೆನೋವೈರಸ್‌ (Adenoviruses)

* ಇನ್‌ಫ್ಲುಯೆಂಜಾ ವೈರಸ್‌

* Epstein-Barr ವೈರಸ್‌

* ಎಂಟೆರೊವೈರಸ್

* ಹರ್ಪೀಸ್‌ ಸಿಂಪ್ಲೆಕ್ಸ್ ವೈರಸ್

ಯಾರಿಗೆ ಟಾನ್ಸಿಲಿಟಿಸ್‌ ಅಪಾಯ ಹೆಚ್ಚು?

ವಯಸ್ಸಯ: 5ರಿಂದ 15 ವರ್ಷದ ಮಕ್ಕಳಿಗೆ ಟಾನ್ಸಿಲಿಟಿಸ್‌ ಅಪಾಯ ಹೆಚ್ಚು. ಇನ್ನು ವಯಸ್ಸಾದವರಲ್ಲೂ ಟಾನ್ಸಿಲಿಟಿಸ್‌ ಕಂಡು ಬರುವುದು.

ಸೋಂಕಾಣುಗಳು: ಮಕ್ಕಳಿಗೆ ಸೋಂಕು ತಗುಲವ ಸಾಧ್ಯತೆ ತುಂಬಾನೇ ಹೆಚ್ಚು, ವಸ್ತುಗಳನ್ನು ಬಾಯಿಗೆ ಕಚ್ಚುವುದು, ಶಾಲೆಗೆ ಹೋಗುವಾಗ ಸೋಂಕು ಹರಡುವುದು. ಇನ್ನ ವಯಸ್ಸಾದವರಲ್ಲೂ ಕಂಡು ಬರುವುದು.

ಸೋಂಕಾಣುಗಳ ಹರಡುವಿಕೆಯಿಂದ

ಟಾನ್ಸಿಲಿಟಿಸ್ ಇರುವ ಮಕ್ಕಳು ಶಾಲೆಗೆ ಹೋದಾಗ ಅಲ್ಲಿರುವ ಮಕ್ಕಳಿಗೆ ಅಥವಾ ಶಿಕ್ಷಕರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು.

ಟಾನ್ಸಿಲಿಟಿಸ್‌ ಹೇಗೆ ಪತ್ತೆ ಹಚ್ಚಲಾಗುವುದು?

ಸ್ವ್ಯಾಬ್‌ ಟೆಸ್ಟ್: ಸ್ವ್ಯಾಬ್‌ ಟೆಸ್ಟ್‌ ಮಾಡಿದರೆ 10-15 ನಿಮಿಷದಲ್ಲಿ ತಿಳಿದು ಬರುವುದು.

ರಕ್ತ ಪರೀಕ್ಷೆ: ಟಾನ್ಸಿಲಿಟಿಸ್‌ಗೆ ವೈರಸ್‌ ದಾಳಿ ಮಾಡಿದಾಗ ಸಿಬಿಸಿ (complete blood cell count) ಕಡಿಮೆಯಾಗುವುದು. ಇದನ್ನು ರಕ್ತ ಪರೀಕ್ಷೆ ಮಾಡಿಸಿದಾಗ ತಿಳಿಯುತ್ತದೆ.

ಟಾನ್ಸಿಲಿಟಿಸ್‌ನಲ್ಲಿ ಗುಳ್ಳೆಗಳು ಇದೆಯೇ ಎಂದು ವೈದ್ಯರು ಪರೀಕ್ಷಿಸಿ ಕಂಡು ಹಿಡಿಯುತ್ತಾರೆ.

ಟಾನ್ಸಿಲಿಟಿಸ್‌ಗೆ ಚಿಕಿತ್ಸೆ ಮಾಡದಿದ್ದರೆ ತೊಂದರೆ ಇದೆಯೇ?

* ಗಂಟಲಿನಲ್ಲಿ ಕೀವಾಗಬಹುದು

* ಕಿವಿ ನೋವು ಉಂಟಾಗುವುದು

* ಉಸಿರಾಟದ ತೊಂದರೆ ಉಂಟಾಗುವುದು.

ಚಿಕಿತ್ಸೆಯೇನು?

*ಟಾನ್ಸಿಲಿಟಿಸ್‌ಗೆ ವೈದ್ಯರ ಬಳಿ ಹೋಗಿ ಚಿಕಿತ್ಸೆಪಡೆಯಿರಿ.

* ಕೆಲವರಿಗೆ ಔಷಧಿಯಲ್ಲಿ ದೂರಾಗುವುದು.

* ಪದೇ ಪದೇ ಟಾನ್ಸಿಲಿಟಿಸ್‌ ಕಾಡುತ್ತಿದ್ದರೆ ಮಾತ್ರ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸೂಚಿಸಬಹುದು.

ಮನೆಮದ್ದು

* ಟಾನ್ಸಿಲಿಟಿಸ್‌ ಬಂದಾಗ ತುಂಬಾನೇ ವಿಶ್ರಾಂತಿ ಮಾಡಿ.

* ಬಿಸಿ ಬಿಸಿ ನೀರನ್ನು ಆಗಾಗ ಕುಡಿಯುತ್ತಲೇ ಇರಿ.

* ಮೃದುವಾದ ಆಹಾರ ಸೇವಿಸಿ

* ಐಸ್‌ಕ್ರೀಮ್‌ ತಿನ್ನಿ

* ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ.

ಟಾನ್ಸಿಲಿಟಿಸ್‌ ಹೇಗೆ ತಡೆಗಟ್ಟಬಹುದು

* ಆಗಾಗ ಕೈ ತೊಳೆಯಿರಿ

* ಎಂಜಲು ಗ್ಲಾಸ್‌, ಎಂಜಲು ಪ್ಲೇಟ್‌ ಬಳಸಬೇಡಿ, ಟೂತ್‌ ಬ್ರೆಷ್‌ ಸ್ವಚ್ಛವಾಗಿರಲಿ


 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries