ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭÀವನ ಮತ್ತು ಗ್ರಂಥಾಲಯದ ವಿಂಶತಿ ವರ್ಷಾಚರಣೆಯ ಅಂಗವಾಗಿ ಸಮಾಜ ಸೇವಕ, ಉದ್ಯಮಿ ನಿರಂಜನ್ ಕೊರಕೋಡು ಅವರಿಗೆ ಕನ್ನಡ ಭವನದ ಗೌರವಾನ್ವಿತ ಪ್ರಶಸ್ತಿಯಾದ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದಂಪತಿಗಳು ನೀಡಿ ಗೌರವಿಸಿದರು.
ಡಾ.ಶಿವಾನಂದ ಬೇಕಲ್, ರಾಮ ಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್.ಆರ್.ಶಶಿಧರ್ ನಾಯ್ಕ್, ನಾಗರಾಜ್ ಕಲ್ಪತರು ಕುಂದಾಪುರ, ಯು.ಕರುಣಾಕರ ರಾವ್ ಉಡುಪಿ, ಸತೀಶ್ ಕುಮಾರ್ ದೋಣಿಬಾಗಿಲು, ಡಾ.ಕೆ.ಜಿ.ವೆಂಕಟೇಶ್ ಶಿವಮೊಗ್ಗ, ಆಟೋಗ್ರಾಫ್ ಪ್ಲೀಸ್ ಚಿತ್ರ ನಿರ್ಮಾಪಕ, ಲಯನ್ ಸುರೇಶ್ ಬಿಜೂರು ಬೆಂಗಳೂರು, ಪ್ರಾಂಶುಪಾಲ ರಾಜೇಶ್ಚಂದ್ರ, ಕಾಸರಗೋಡು ನಗರಸಭಾ ಕೌನ್ಸಿಲರ್ ವರ ಪ್ರಸಾದ್ ಕೋಟೆಕಣಿ, ಕನ್ನಡ ಭವನ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೂಡ್ಲು, ಮಾಜಿ ಕೌನ್ಸಿಲರ್ ರಾಧಾಕೃಷ್ಣ ಅಣಂಗೂರು, ವಿದ್ಯಾನಂದ ಹೂಡೆ, ಪ್ರಕಾಶ್ಚಂದ್ರ, ರೇಖಾ ಸುದೇಶ್ ರಾವ್, ಲೋಕೇಶ್ ಅಣಂಗೂರು, ಶಿಕ್ಷಣ ತಜ್ಞ ಅಭಿಲಾಶ್ ಕ್ಷತ್ರಿಯ, ರಾಜೇಶ್ ಕೋಟೆಕಣಿ, ಪ್ರದೀಪ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.
ನಿರಂಜನ ಕೊರಕೋಡು ಅವರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ಪ್ರದಾನ
0
ಜನವರಿ 04, 2023


