ತಿರುವನಂತಪುರ: ರಾಜ್ಯಮಟ್ಟದ ಕಲೋತ್ಸವದಲ್ಲಿ ಮುಂದಿನ ವರ್ಷದಿಂದ ಮಾಂಸಾಹಾರ ವ್ಯವಸ್ಥೆ ಮಾಡಲಾಗುವುದು ಎಂದು ಶಿಕ್ಷ್ಷಣ ಸಚಿವ ವಿ. ಶಿವನ್‍ಕುಟ್ಟಿ ಹೇಳಿದ್ದಾರೆ. ವೆಜ್ ಮತ್ತು ನಾನ್ ವೆಜ್ ಎರಡನ್ನೂ ಸೇವಿಸುವವರ ಜೊತೆ ಸರ್ಕಾರವಿದೆ ಎಂದರು. ಮಾಧ್ಯಮಗಳಿಗೆ ಅವರು ಇಂದು ಈ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ 60 ವರ್ಷಗಳಿಂದ ಕಲೋತ್ಸವ ನಡೆಯುತ್ತಿದೆ. ಅಂದಿನಿಂದ ಸಸ್ಯಾಹಾರ ಪದ್ಧತಿ ರೂಢಿಯಲ್ಲಿದೆ. ಕ್ರೀಡಾ ಮೇಳದಲ್ಲಿ ವೆಜ್ ಮತ್ತು ನಾನ್ ವೆಜ್ ಆಹಾರ ನೀಡಲಾಗುತ್ತದೆ. ಕಲೋತ್ಸವದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಆಹಾರ ಸೇವಿಸುತ್ತಾರೆ. ನಾನ್ ವೆಜ್ ನೀಡಲು ಯಾವುದೇ ತೊಂದರೆ ಇಲ್ಲ. ಈ ವರ್ಷದ ಕಲೋತ್ಸವ ಕೊನೆಗೊಳ್ಳಲು ಇನ್ನೆರಡು ದಿನ ಮಾತ್ರ ಬಾಕಿ ಇದೆ. ಈ ಮಧ್ಯೆ ನಾನ್ ವೆಜ್ ನೀಡಬಹುದೇ ಎಂದು ಅಧಿಕಾರಿಗಳ ಜತೆ ಚರ್ಚಿಸಬಹುದು. ಮುಂದಿನ ವರ್ಷ ಹೇಗಾದರೂ ಕಲೋತ್ಸವಕ್ಕೆ ಮಾಂಸಾಹಾರ ಇರುತ್ತದೆ ಎಂದು ಶಿವನ್‍ಕುಟ್ಟಿ ಭರವಸೆ ನೀಡಿದರು.
ನಾನ್ ವೆಜ್ ಸೇವಿಸುವ ಮಕ್ಕಳಿಗೆ ದೈಹಿಕ ಸಮಸ್ಯೆಗಳು ಎದುರಾಗುವ ಆತಂಕವಿದೆ. ಅದರ ಹೊರತಾಗಿ ಮಾಂಸಾಹಾರ ನೀಡಬಾರದೆಂಬ ಒತ್ತಾಯ ಸರಕಾರಕ್ಕಿಲ್ಲ. 60 ವರ್ಷಗಳಿಂದ ಇಲ್ಲದ ಬ್ರಾಹ್ಮಣ ಪಾರಮ್ಯವನ್ನು ಈಗ ಎಲ್ಲರೂ ನೋಡುತ್ತಿದ್ದಾರೆ. 61ನೇ ಕಲಾ ಉತ್ಸವ ಯಾವುದೇ ಸಮಸ್ಯೆಗಳಿಲ್ಲದೆ ನಡೆಯುತ್ತಿದೆ. ವಿವಾದವನ್ನು ಸೃಷ್ಟಿಸುವ ಯತ್ನ ಹೊಸಕುವ ಪ್ರಯತ್ನವಾಗಿದೆ ಎಂದು ಶಿವನ್‍ಕುಟ್ಟಿ ಪ್ರತಿಕ್ರಿಯಿಸಿದ್ದಾರೆ.
ಮುಂದಿನ ವರ್ಷ ರಾಜ್ಯ ಶಾಲಾ ಕಲೋತ್ಸವದಲ್ಲಿ ಮಾಂಸಾಹಾರವೂ ಸೇರ್ಪಡೆ: ಶಿಕ್ಷಣ ಸಚಿವ
0
ಜನವರಿ 05, 2023
Tags


