HEALTH TIPS

ಚಿನ್ನದ ಕಳ್ಳಸಾಗಣೆ; ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಸೇರಿದಂತೆ ಮೂವರ ಬಂಧನ



             ಎರ್ನಾಕುಳಂ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ವಿಮಾನ ನಿಲ್ದಾಣದ ನೌಕರರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
                 ನೆಡುಂಬಶ್ಶೇರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಗ್ರೌಂಡ್ ಹ್ಯಾಂಡ್ಲಿಂಗ್ ಉದ್ಯೋಗಿಗಳಾದ ವಿಷ್ಣು ಹಾಗೂ ಅಭಿಲಾಷ್ ಮತ್ತು ಮುವಾಟ್ಟುಪುಳ ಮೂಲದ ಮಹಮ್ಮದ್ ಫಾಜಿಲ್ ಬಂಧಿತ ಆರೋಪಿಗಳು. ಕಂದಾಯ ಗುಪ್ತಚರ ನಿರ್ದೇಶನಾಲಯ ಕ್ರಮ ಕೈಗೊಂಡಿದೆ.
               ಬುಧವಾರ 1 ಕೆಜಿಗೂ ಹೆಚ್ಚು ಚಿನ್ನಾಭರಣದೊಂದಿಗೆ ಮೂವರು ಸಿಕ್ಕಿಬಿದ್ದಿದ್ದರು. ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಫಾಜಿಲ್ ಚಿನ್ನದೊಂದಿಗೆ ಆಗಮಿಸಿದ್ದ. ಈತ ಚಿನ್ನದೊಂದಿಗೆ ಬರುತ್ತಿರುವ ಬಗ್ಗೆ ಅಧಿಕಾರಿಗಳಿಗೆ ರಹಸ್ಯ ಮಾಹಿತಿ ಸಿಕ್ಕಿತ್ತು. ಇದರ ಆಧಾರದ ಮೇಲೆ ಅವರೂ ತಪಾಸಣೆಗೆ ಬಂದಿದ್ದರು.
          ವಿಮಾನ ನಿಲ್ದಾಣಕ್ಕೆ ಆಗಮಿಸಿದ ಫಾಜಿಲ್ ವಾಶ್ ರೂಂನಲ್ಲಿ ಏರ್ ಇಂಡಿಯಾ ಏರ್ ಟ್ರಾನ್ಸ್‍ಪೆÇೀರ್ಟ್ ಸರ್ವೀಸ್ ಲಿಮಿಟೆಡ್‍ನ ಉದ್ಯೋಗಿ ಅಭಿಲಾಷ್‍ಗೆ ಚಿನ್ನವನ್ನು ಹಸ್ತಾಂತರಿಸಿದ. ಆಗ ಅಲ್ಲಿಗೆ ಬಂದ ಅಧಿಕಾರಿಗಳು ಇಬ್ಬರನ್ನೂ ರೆಡ್‍ಹ್ಯಾಂಡ್ ಆಗಿ ಹಿಡಿದರು. ಆತನನ್ನು ವಿಚಾರಣೆ ನಡೆಸಿದಾಗ ಚಿನ್ನ ಸಾಗಾಟದಲ್ಲಿ ಆತನ ಸಹೋದ್ಯೋಗಿ ವಿಷ್ಣು ಕೂಡ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ನಂತರ ಮೂವರ ಬಂಧನವನ್ನು ದಾಖಲಿಸಲಾಗಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries