ಕಾಸರಗೋಡು: 2023 ಜನವರಿ 23 ರಂದು ಸಂಸತ್ತಿನಲ್ಲಿ ಪ್ರಧಾನ ಮಂತ್ರಿಯೊಂದಿಗೆ ಸಂವಾದ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಭಾಷಣ ಸ್ಪರ್ಧೆಗಳ ಮೂಲಕ ಭಾಗವಹಿಸುವವರನ್ನು ಆಯ್ಕೆ ಮಾಡಲಾಗುತ್ತದೆ.
ಜಿಲ್ಲೆಯಿಂದ ನೆಹರು ಯುವ ಕೇಂದ್ರ ನದೆಸುವ ಭಾಷಣ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಒಬ್ಬರಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. 'ನೇತಾಜಿ ಸುಭಾಷ್ ಚಂದ್ರ ಬೋಸ್-ಲೈಫ್ ಆ್ಯಂಡ್ ಲೆಗಸಿ ಇನ್ ದಿ ಏಜ್ ಆಫ್ ಅಮೃತ್ ಕಾಲ್"' ಎಂಬ ವಿಷಯದಲ್ಲಿ ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಭಾಷಣ ಸ್ಪರ್ಧೆ ನಡೆಯಲಿರುವುದು. ಪ್ರತಿ ರಾಜ್ಯದಿಂದಲೂ ಒಬ್ಬರಿಗೆ ಅವಕಾಶ ಲಭ್ಯವಾಗಲಿದ್ದು, 15 ರಿಂದ 29 ವರ್ಷ ಪ್ರಾಯದೊಳಗಿನ ಅಭ್ಯರ್ಥಿಗಳು ಸ್ಪರ್ಧಿಸಬಹುದು. ನೋಂದಣಿ ಮತ್ತು ವಿವರಗಳಿಗಾಗಿ ದೂರವಾಣಿ ಸಂಖ್ಯೆ(7736426247)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ನೆಹರು ಯುವ ಕೇಂದ್ರ ನಡೆಸುವ ಭಾಷಣ ಸ್ಪರ್ಧೆ ಮೂಲಕ ಪ್ರಧಾನಿ ಜೊತೆ ಸಂವಾದಕ್ಕೆ ಅವಕಾಶ
0
ಜನವರಿ 04, 2023
Tags

