ಕೋಝಿಕ್ಕೋಡ್: ಯುವಮೋರ್ಚಾ ನೇತಾರ, ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿರುವ ಪಾಪ್ಯುಲರ್ ಫ್ರಂಟ್‍ನ ನಾಲ್ವರು ಕಾರ್ಯಕರ್ತರ ಬಗ್ಗೆ ಸುಳಿವು ನೀಡುವವರಿಗೆ ಪಾರಿತೋಷಕ ಪ್ರಕಟಿಸಿ ಎನ್‍ಐಎ ಲುಕೌಟ್ ನೋಟೀಸು ಜಾರಿಗೊಳಿಸಿದೆ.
ಕೋಯಿಕ್ಕೋಡು ನಗರದ ವಿವಿಧ ಕೇಂದ್ರಗಳಲ್ಲಿ ಈ ನೋಟೀಸು ಲಗತ್ತಿಸಲಾಗಿದೆ. ಸುಳ್ಯ ಬುದು ಹೌಸ್ ನಿವಾಸಿ ಮಹಮ್ಮದ್ ಮುಸ್ತಫಾ ಯಾನೆ ಮುಸ್ತಫ್ ಪೈಚಾರ್, ಮಡಿಕೇರಿಯ ಎಂ.ಎಸ್ ತೌಫಲ್ ಎಂಬವರ ಬಗ್ಗೆ ಮಾಹಿತಿ ನೀಡುವವರಿಗೆ ತಲಾ ಐದು ಲಕ್ಷ, ದ.ಕ ಜಿಲ್ಲೆಯ ಕಲ್ಲುಮುಟ್ಟಿಲ್ ನಿವಾಸಿ ಎಂ.ಆರ್. ಉಮ್ಮರ್ ಫಾರೂಕ್ ಯಾನೆ ಉಮ್ಮರ್ ಹಾಗೂ ಸಿದ್ದಿಕ್ ಯಾನೆ ಪೈಂಟರ್ ಸಿದ್ದೀಕ್ ಅಲಿಯಾಸ್ ಗುಜರಿ ಸಿದ್ದೀಕ್ ಎಂಬವರ ಬಗ್ಗೆ ಮಾಹಿತಿ ನೀಡುವವರಿಗೆ ತಲಾ ಎರಡು ಲಕ್ಷ ರೂ. ಪಾರಿತೋಷಕ ನೀಡುವ ಬಗ್ಗೆ ನೋಟೀಸು ಜಾರಿಗೊಳಿಸಲಾಗಿದೆ.
ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಸುಳಿವು ನೀಡುವವರಿಗೆ ಪಾರಿತೋಷಕ-ಲುಕೌಟ್ ನೋಟೀಸ್
0
ಜನವರಿ 04, 2023

