ಬದಿಯಡ್ಕ: ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಕುಂಬಳೆ ಉಪಜಿಲ್ಲಾ ಸಮಿತಿ ಸಭೆ ಚೇಡಿಕ್ಕಾನ ಎಜೆಬಿಎಸ್ ಶಾಲೆಯಲ್ಲಿ ಜರಗಿತು. ಕುಂಬಳೆ ಉಪಜಿಲ್ಲಾ ಸಮಿತಿ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಉದ್ಘಾಟಿಸಿದರು. ಉಪಜಿಲ್ಲಾ ಸಮಿತಿ ಅಧ್ಯಕ್ಷ ಬಿನೊಯ್ ಎಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಪ್ರಶಾಂತ್ ಕಾನತ್ತೂರು ಮುಖ್ಯ ಭಾಷಣ ಮಾಡಿದರು. ಉಪಸಮಿತಿ ಅಧ್ಯಕ್ಷ ರಾಧಾಕೃಷ್ಣ ಮಾಸ್ತರ್, ಉಪಜಿಲ್ಲಾ ಕೋಶಾಧಿಕಾರಿ ಮಲ್ಲಿಕಾ ಟೀಚರ್ ಶುಭ ಹಾರೈಸಿದರು. ಬದಿಯಡ್ಕ ಘಟಕದ ಅಧ್ಯಾಪಕ ಸಂಘಟನೆಯ ಸದಸ್ಯರು ಭಾಗವಹಿಸಿದರು. ಜನವರಿ 22ರಂದು ಬದಿಯಡ್ಕ ನವಜೀವನ ಶಾಲೆಯಲ್ಲಿ ನಡೆಯುವ ಕುಂಬಳೆ ಉಪಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಘಟಕದ ಕಾರ್ಯದರ್ಶಿ ಉಮೇಶ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.
ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಕುಂಬಳೆ ಉಪಜಿಲ್ಲಾ ಸಭೆ
0
ಜನವರಿ 19, 2023
Tags

.jpg)
