ಕಾಸರಗೋಡು: ದೇಶದ ಕೃಷಿ ಮತ್ತು ಸಂಸ್ಕøತಿಯನ್ನು ರಕ್ಷಿಸುವುದು ಸೇರಿದಂತೆ ಕೃಷಿ ಕ್ಷೇತ್ರದ ಸಾಮಥ್ರ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವಲ್ಲಿ ಹೊಸ ಪೀಳಿಗೆ ಮುಂದಾಗಬೇಕು ಎಂದು ವಿಧಾನಸಭಾಧ್ಯಕ್ಷ ಎ.ಎನ್.ಶಂಸೀರ್ ತಿಳಿಸಿದ್ದಾರೆ. ಅವರು ಚೆರ್ವತ್ತೂರಿನಲ್ಲಿ ನೀಲೇಶ್ವರಂ ಬ್ಲಾಕ್ ಪಂಚಾಯಿತಿಯ ಅಗ್ರಿ ಫೆಸ್ಟ್, ಕೃಷಿ ವಸ್ತುಪ್ರದರ್ಶನ ಮಾರುಕಟ್ಟೆ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಸಂಸ್ಕøತಿಯನ್ನು ಪೋಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಯಶಸ್ಸು ಕಾಣುತ್ತಿವೆ. ಎಲ್ಲರೂ ಬಯಲಿನತ್ತ, ಹಸಿರು ಕೇರಳ ಮೊದಲಾದ ಕಾರ್ಯಕ್ರಮಗಳು ಯುವ ಪೀಳಿಗೆಯನ್ನು ಕೃಷಿ ಕ್ಷೇತ್ರಕ್ಕೆ ಮರಳಿ ಕರೆತರುವಲ್ಲಿ ಸಹಾಯ ಮಾಡಿದೆ. ತ್ಯಾಜ್ಯ ನಿರ್ವಹಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಯುವುದರ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯಿದೆ ಎಂದೂ ತಿಳಿಸಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಕರುಣಾಕರನ್, ಮಾಜಿ ಶಾಸಕ ಕೆ.ಕುಞÂರಾಮನ್‍ರಾಮನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ.ಪ್ರಮೀಳಾ ಗ್ರಾಮ ಪಂಚಾಯಿತಿ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ವತ್ಸಲನ್, ನೀಲೇಶ್ವರ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಪಿ.ಕೆ.ಲಕ್ಷ್ಮಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸಿ.ಜೆ.ಸಜಿತ್ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಟಿ. ವನಜ, ಬ್ಲಾಕ್ ಪಂಚಾಯಿತಿ ಸದಸ್ಯರಾದ ಇ.ವಲ್ಲಿ, ಟಿ.ಎಸ್.ನಜೀಬ್ಲಾಕ್ ಪಿಟಿ.ಎಸ್.ನಜೀಬ್ ಗ್ರಾಮ ಪಂಚಾಯಿತಿ ಸದಸ್ಯೆ ಪಿ.ಪದ್ಮಿನಿ, ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ಪಿ.ರಾಗೇಶ್ ಉಪಸ್ಥಿತರಿದ್ದರು. ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ ಸ್ವಾಗತಿಸಿದರು. ಕೆ. ಬಿಂದು ವಂದಿಸಿದರು. ಕಯ್ಯೂರ್ ಜಂಕ್ಷನ್‍ನಿಂದ ಉತ್ಸವ ನಗರ 11ರವರೆಗೆ ಮೆರವಣಿಗೆ ನಡೆಯಿತು. ಹನ್ನೊಂದು ದಿವಸಗಳ ಕಾಲ ನಡೆಯಲಿರುವ ಮಾರುಕಟ್ಟೆ ಮೇಳ ಫೆ. 14ರಂದು ಸಮಾರೋಪಗೊಳ್ಳಲಿದೆ. ಮೇಳದ ಅಂಗವಾಗಿ ಕೃಷಿ ವಿಚಾರ ಸಂಕಿರಣ, ಕೃಷಿ ಉತ್ಪನ್ನ ಮತ್ತು ಪರಿಕರಗಳ ಪ್ರದರ್ಶನ ಮತ್ತು ಮಾರಾಟ, ವಿಜ್ಞಾನ ಮಳಿಗೆಗಳು, ಫುಡ್ ಕೋರ್ಟ್‍ಗಳು, ಕಲಾ ಪ್ರದರ್ಶನಗಳು, ಮನರಂಜನೆ ಸೇರಿದಂತೆ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಕೃಷಿ ಸಂಸ್ಕತಿ ರಕ್ಷಣೆ ಕಾಲಘಟ್ಟದ ಅನಿವಾರ್ಯ: ಕೃಷಿ ವಸ್ತುಪ್ರದರ್ಶನ ಮಾರುಕಟ್ಟೆ ಮೇಳ ಉದ್ಘಾಟಿಸಿ ಸ್ಪೀಕರ್ ಅಭಿಪ್ರಾಯ
0
ಫೆಬ್ರವರಿ 05, 2023


