ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಾಮಾಜಿಕ ವಿಭಾಗದ ವಿದ್ಯಾರ್ಥಿಗಳಿಗಾಗಿ ಗ್ರಾಮೀಣ ಸಹವಾಸ ಶಿಬಿರ ಕಳ್ಳಾರ್ ಪಂಚಾಯಿತಿಯ ಕುಡುಂಬೂರಿನಲ್ಲಿ ಆರಂಭಗೊಂಡಿತು. ಹತ್ತು ದಿವಸಗಳ ಕಾಲ ನಡೆಯಲಿರುವ ಶಿಬಿರ "ರೂಟ್ಸ್" ಎಂಬ ಶೀರ್ಷಿಕೆಯ ಪ್ರಚಾರ ಅಭಿಯಾನದೊಂದಿಗೆ ಪ್ರಾರಂಭವಾಯಿತು.
ವಿದ್ಯಾರ್ಥಿಗಳು ಆಯ್ದ ಕೇಂದ್ರಗಳಲ್ಲಿ ಕಲಾ-ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಶಿಬಿರದ ಕುರಿತು ಸ್ಥಳೀಯ ಜನರಿಗೆ ಮಾಹಿತಿ ನೀಡಿದರು. ಮನೆಗಳಿಗೆ ಭೇಟಿ ನೀಡಿ ಗ್ರಾಮವಾಸಿಗಳ ಜತೆ ಸಂವಾದ ನಡೆಸಿದರು. ಬಳಾಂತೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಟೂಡೆಂಟ್ ಪೋಲಿಸ್ ಕ್ಯಾಡೆಟ್(ಎಸ್‍ಪಿಸಿ)ವತಿಯಿಂದ ಶಿಬಿರದ ಕೆಡೆಟ್‍ಗಳು ಮತ್ತು ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಯಿತು. ಎಸ್‍ಪಿಸಿ ರಾಜ್ಯ ಸಂಪನ್ಮೂಲ ವ್ಯಕ್ತಿ ನೀರಲ್ ಕುಮಾರ್ , ಜಿಲ್ಲಾ ನೋಡಲ್ ಅಧಿಕಾರಿ ಶ್ರೀಧರನ್ ಮಾತನಾಡಿದರು. ವಿದ್ಯಾರ್ಥಿಗಳು ಗ್ರಾಮಸ್ಥರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿದರು. ಗ್ರಾಮವಾಸಿಗಳ ಅಭಿವೃದ್ಧಿಗಾಗಿ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಕೈಗೊಮಡಿರುವ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಯೋಗ, ಜಾಗೃತಿ ತರಗತಿಗಳು, ಸಮುದಾಯ ಭೋಜನ, ವೈದ್ಯಕೀಯ ಶಿಬಿರ ಶಿಬಿರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಸಂಯೋಜಕ ಪೆÇ್ರ. ಎ.ಕೆ. ಮೋಹನ್ ಅವರ ಮಾರ್ಗದರ್ಶನದಲ್ಲಿ 31 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಶಿಬಿರದಲ್ಲಿದ್ದಾರೆ.
ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಂದ ಸಹವಾಸ ಶಿಬಿರಕ್ಕೆ ಚಾಲನೆ
0
ಫೆಬ್ರವರಿ 05, 2023


