ಕಾಸರಗೋಡು: ಇತಿಹಾಸ ಪ್ರಸಿದ್ಧ ಕಾಸರಗೋಡು ನೆಲ್ಲಿಕುಂಜೆ ಮುಹಿಯುದ್ದೀನ್ ಜಮಾಅತ್ ಮಸೀದಿ ವಠಾರದಲ್ಲಿ ನಡೆದುಬರುತ್ತಿದ್ದ ತಙಳ್ ಉಪ್ಪಪ ಉರುಸ್ ಸಂಪನ್ನಗೊಂಡಿತು. ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿಪತ್ತನಾಪುರಂ ಧಾರ್ಮಿಕ ಪ್ರವಚನ ನೀಡಿದರು.
ಕಾಸರಗೋಡು, ಕಣ್ಣೂರು ಹಾಗೂ ದ.ಕ ಜಿಲ್ಲೆಯಿಂದಲೂ ನೂರರು ಸಂಖ್ಯೆಯಲ್ಲಿ ಜಾತಿಮತ ಭೇದವಿಲ್ಲದೆ ಭಕ್ತಾದಿಗಳು ಆಗಮಿಸಿದ್ದರು. ಎರಡು ವರ್ಷಗಳಿಗೆ ಒಂದುಬಾರಿ ಉರುಸ್ ಸಮಾರಂಭ ನಡೆಯುತ್ತಿದ್ದು, ಕೋಮುಸೌಹಾರ್ದತೆ ಹಾಗೂ ಭಾವೈಕ್ಯದ ಸಂಕೇತವಾಗಿಯೂ ಉರುಸ್ ಖ್ಯಾತಿ ಗಳಿಸಿದೆ. ಹನ್ನೊಂದು ದಿವಸಗಳ ಕಾಲ ಉರುಸ್ ಸಮಾರಂಭ ನಡೆದು 12ನೇ ದಿನವಾಬ ಭಾನುವರ ಸಾವಿರಾರು ಮಂದಿಗೆ ತುಪ್ಪದ ಅನ್ನ ವಿತರಿಸಲಾಯಿತು. ಉರುಸ್ ಸಮಿತಿ ಅಧ್ಯಕ್ಷ ಟಿ.ಎ ಮಹಮ್ಮದ್ ಹಾಜಿ, ಉರುಸ್ ಸಮಿತಿ ಪದಾಧಿಕಾರಿಗಳುಉಪಸ್ಥಿತರಿದ್ದರು.
ಇತಿಹಾಸಪ್ರಸಿದ್ಧ ನೆಲ್ಲಿಕುಂಜೆ ತಙಳ್ ಉಪ್ಪಾಪ ಉರುಸ್‍ಗೆ ಸಮಾರೋಪ
0
ಫೆಬ್ರವರಿ 05, 2023


