ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ವಿಷ್ಣುಮಂಗಲ ದೇವಸ್ಥಾನದ ವಾರ್ಷಿಕೋತ್ಸವ ಫೆ. 13ರಿಂದ 17ರ ವರೆಗೆ ಜರುಗಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ಅವರ ಅನುಗ್ರಹದೊಂದಿಗೆ, ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
13ರಂದು ಬೆಳಗ್ಗೆ 9.30ಕ್ಕೆ ಧ್ವಜಾರೋಹಣ, ಭೂತಬಲಿ, ಹಸಿರುವಾಣಿ ಮೆರವಣಿಗೆ, ಉಗ್ರಾಣ ಮುಹೂರ್ತ, ರಾತ್ರಿ 8ಕ್ಕೆ ದೀಪೋತ್ಸವ ನಡೆಯುವುದು. 15ರಂದು ರಾಥ್ರಿ 8ಕ್ಕೆ ನಡು ದೀಪೋತ್ಸವ, 16ರಂದು ರಾತ್ರಿ 9ಕ್ಕೆ ಬೆಡಿ ಉತ್ಸವ, ಶ್ರೀ ಮಠದ ಎದುರು ಪುಷ್ಪರಥೋತ್ಸವ ನಡೆಯುವುದು. ಈ ಸಂದರ್ಭ ಉದ್ಯಮಿ ಸತೀಶ್‍ರಾವ್ ದಂಪತಿ ಎಡನೀರು ಅವರ ಕೊಡುಗೆಯನ್ವಯ ನಿರ್ಮಿಸಲಾದ ಮಹಾದ್ವಾರದ ಉದ್ಘಾಟನೆ, ಉಮೇಶ್ ಕುಮಾರ್ ಎಡನೀರು ಕೊಡುಗೆಯಾಗಿ ನಿರ್ಮಿಸಲಾದ ಶ್ರೀದೇವರ ಕಟ್ಟೆಯ ಸಮರ್ಪಣೆ, ಶ್ರೀ ತಾರಾ ಸುಧೀಂದ್ರ ಮುಂಬೈ ಕೊಡುಗೆಯಾಗಿ ನೀಡಿದ ಉತ್ಸವ ಮೂರ್ತಿಯ ಸಮರ್ಪಣಾ ಕಾರ್ಯ ನಡೆಯಲಿರುವುದು. ಫೆ. 17ರಂದು ಬೆಳಗ್ಗೆ 8.30ಕ್ಕೆ ಶಯನೋದ್ಘಾಟನೆ, ರಾತ್ರಿ ಶ್ರೀ ಮಠದ ಎದುರು ನೃತ್ಯೋತ್ಸವ, ಕೆರೆಯಲ್ಲಿ ತೆಪ್ಪೋತ್ಸವ, ಅವಭೃತಸ್ನಾನ, ಧ್ವಜಾವರೋಹಣ ನಡೆಯಲಿರುವುದು. ಉತ್ಸವದ ಅಂಗವಾಗಿ ಪ್ರತಿ ದಿನ ಸಂಜೆ 6.30ರಿಂದ ವಿವಿಧ ಸಾಂಸ್ಕøತಿಕ ವೈವಿಧ್ಯ ನಡೆಯಲಿರುವುದು.
13ರಿಂದ ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ವಾರ್ಷಿಕೋತ್ಸವ
0
ಫೆಬ್ರವರಿ 05, 2023


