ಕೇಂದ್ರ ಸರ್ಕಾರದ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಆಯೋಜಿಸಲು ಮತ್ತು ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನೆಹರು ಯುವ ಕೇಂದ್ರ ಕ್ರಿಯಾ ಚಟುವಟಿಕೆ -ಕಾರ್ಯಕ್ರಮಗಳನ್ನು ಆಯೋಜಿಸಲು ಯೂತ್ ಕ್ಲಬ್ ಗಳ ಭಾಗವಹಿಸುವಿಕೆಯೊಂದಿಗೆ ಸಂಘಟಿಸಲು ಹಾಗೂ ನೇತೃತ್ವ ವಹಿಸಲು ಆಸಕ್ತಿ ಹೊಂದಿರುವ ಕಾಸರಗೋಡು ಜಿಲ್ಲೆಯ ಖಾಯಂ ನಿವಾಸಿಗಳಿಂದ ರಾಷ್ಟ್ರೀಯ ಯುವ ಸ್ವಯಂಸೇವಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನಿಷ್ಠ
ಶೈಕ್ಷಣಿಕ ಅರ್ಹತೆ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಉನ್ನತ ಶೈಕ್ಷಣಿಕ ಅರ್ಹತೆ
ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.ಏಪ್ರಿಲ್ 1 2023 ಕ್ಕೆ 18 ರಿಂದ 29 ನಡುವಿನ
ವಯಸ್ಸಿನ ಮಿತಿ. ರೆಗೂಲರ್ ವಿದ್ಯಾರ್ಥಿಗಳು ಮತ್ತು ಇತರ ಉದ್ಯೋಗಿಗಳು ಅರ್ಜಿ
ಸಲ್ಲಿಸಬಾರದು.ಕಳೆದ ವರ್ಷ ಅರ್ಜಿ ಸಲ್ಲಿಸಿ ಅವಕಾಶ ಸಿಗದವರೂ ಈ ವರ್ಷ ಅರ್ಜಿ
ಸಲ್ಲಿಸಬಹುದು. ಮಾಸಿಕ ಗೌರವಧನ ರೂ.5000 ನೀಡಲಾಗುವುದು. ಆನ್‌ಲೈನ್‌ನಲ್ಲಿ ಅರ್ಜಿ
ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 9. ವೆಬ್‌ಸೈಟ್ www.nyks.nic.in.
ದೂರವಾಣಿ:04994 293544, 7736426247, 9633939185.


